ಯತ್ನಾಳ್ ಜೊತೆಗೂಡಿ ಪಾದಯಾತ್ರೆ ಮಾಡುವೆ ; ರಮೇಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ
ಬೆಳಗಾವಿ : ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ಈಗಾಗಲೇ ಸದನದ ಒಳಗೆ ಸಾಕಷ್ಟು ಹೋರಾಟ ಮಾಡಿದ್ದೇವೆ. ಇದೊಂದು ದೊಡ್ಡ ಹಗರಣ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ನಿರ್ಧಾರ ಪಡೆದುಕೊಂಡು ಯತ್ನಾಳ್ ಜೊತೆ ಸೇರಿ ಪಾದಯಾತ್ರೆ ಮಾಡುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಗೋಕಾಕ್ ಪಟ್ಟಣದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯದಲ್ಲೇ ಅತ್ಯಂತ ದೊಡ್ಡ ಹಗರಣ. ದಲಿತರ ಹಣವನ್ನು ನುಂಗಿ ನೀರು ಕುಡಿಯಲಾಗಿದೆ. ಈ ಕುರಿತು ನಮ್ಮ ಹೋರಾಟ ಇನ್ನೂ ಹೆಚ್ಚಾಗಬೇಕಿತ್ತು. ಹೈಕಮಾಂಡ್ ನಿಂದ ಅನುಮತಿ ಪಡೆದು ಯತ್ನಾಳ್ ಹಾಗೂ ಇನ್ನೂ ಕೆಲ ನಾಯಕರ ಜೊತೆ ಸೇರಿ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತೇನೆ ಎಂದರು.
ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಕುರಿತು ವಿಪಕ್ಷವಾಗಿ ನಾವು ಧ್ವನಿ ಎತ್ತಿದ್ದೇವೆ. ಮೈಸೂರು ಪಾದಯಾತ್ರೆ ಮಾಡಲು ಹೋರಟಿದ್ದಾರೆ. ಆದರೆ ಅದಕ್ಕಿಂತ ದೊಡ್ಡ ಹಗರಣ ದಲಿತರ ಹಣ ನುಂಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಈ ಕುರಿತು ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದರು.
ಇನ್ನೂ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕ ರಮೇಶ್. ನಾನು ಅವರ ಜೊತೆ ಮಾತನಾಡಲ್ಲ. ಅವರು ರಾಜ್ಯಾಧ್ಯಕ್ಷನೆಂದು ಒಪ್ಪಿಕೊಂಡಿಲ್ಲ. ನಾನು ನೇರವಾಗಿ ನಮ್ಮ ಪಕ್ಷದ ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಹೊರತು ಯಾರ ಬಳಿಯೂ ಮಾತನಾಡಲ್ಲ ಎಂದರು.