
Video : ಲಖನ್ ಜಾರಕಿಹೊಳಿ ಬಿಜೆಪಿಗೆ ಸಪೋರ್ಟ್ ಮಾಡಲಿ, ಬಿಡಲಿ ನೋ ಪ್ರಾಬ್ಲಂ ಎಂದ ಸಚಿವ ಉಮೇಶ್ ಕತ್ತಿ

ಅಥಣಿ : ಬಿಜೆಪಿ ಪಕ್ಷ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಇಲ್ಲಿ ಯಾವ ನಾಯಕನ ಅವಶ್ಯಕತೆ ಇಲ್ಲ. ಜೊತೆಗೆ ಪಕ್ಷೇತರರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬಿಜೆಪಿಗೆ ಬೆಂಬಲಿಸಿದರೆ ಅಷ್ಟೇ, ಬೆಂಬಲಿಸದಿದ್ದರು ಅಷ್ಟೇ ಎಂದು ಸಚಿವ ಉಮೇಶ್ ಕತ್ತಿ ಅಭಿಪ್ರಾಯಪಟ್ಟರು.
ವಿಧಾನದ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಶುಕ್ರವಾರ ಅಥಣಿ ನಗರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆ ನಂತರ ಮಾತನಾಡಿದ ಇವರು. ಸಧ್ಯ ನಡೆಯುತ್ತಿರುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಈ ಕುರಿತು ಯಾವುದೇ ಅನುಮಾನ ಬೇಡ. ಸಧ್ಯ ಬಿಜೆಪಿಗೆ ಯಾವ ನಾಯಕನ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಲಖನ್ ಜಾರಕಿಹೊಳಿ ಕುರಿತಂತೆ ಸಚಿವ ಉಮೇಶ್ ಕತ್ತಿ ಹೇಳಿಕೆ ಮಹತ್ವ ಪಡೆದಿದ್ದು ಕತ್ತಿ ಹಾಗೂ ಜಾರಕಿಹೊಳಿ ಮನೆತನದ ನಡುವೆ ರಾಜಕೀಯ ಸಮರ ನಡೆಯುತ್ತಿರುವುದು ಈ ಮೂಲಕ ಸ್ಪಷ್ಟವಾಗಿದೆ. ಜೊತೆಗೆ ಬಿಜೆಪಿ ಪಕ್ಷಕ್ಕೆ ಯಾವ ನಾಯಕರ ಅವಶ್ಯಕತೆ ಇಲ್ಲ ಎಂಬ ಹೇಳಿಕೆಯು ಸಧ್ಯ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದ್ದು ಮುಂದಿನ ರಾಜಕೀಯ ಚಿತ್ರಣವನ್ನು ಕಾದು ನೋಡಬೇಕು.