Select Page

Advertisement

ಕೋವಿಡ್ ಮಾರ್ಗಸೂಚಿ : ವಾರಾಂತ್ಯದ ಕರ್ಫ್ಯೂ ಸೇರಿದಂತೆ ಸಂಪೂರ್ಣ ಮಾಹಿತಿ – 2022

ಕೋವಿಡ್ ಮಾರ್ಗಸೂಚಿ :  ವಾರಾಂತ್ಯದ ಕರ್ಫ್ಯೂ ಸೇರಿದಂತೆ ಸಂಪೂರ್ಣ ಮಾಹಿತಿ – 2022

ಬೆಂಗಳೂರು : ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು ಬರುವ ಶುಕ್ರವಾರದಿಂದ ಸೋಮವಾರದವರೆಗೆ ವೀಕೆಂಡ್  ಕಫ್ಯೂ೯ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ( Covid Guidelines )

ಹೊಸ ಮಾರ್ಗಸೂಚಿ ಕುರಿತು ಸಂಪೂರ್ಣ ಮಾಹಿತಿ

1 ರಿಂದ 9 ನೇ ಶಾಲೆಗಳು ಹಾಗೂ ಪದವಿ ಶಾಲಾ ಕಾಲೇಜುಗಳು ಬಂದ್ ( ಬೆಂಗಳೂರಿನಲ್ಲಿ ಮಾತ್ರ )

ರಾಜ್ಯಾದ್ಯಂತ ಶುಕ್ರವಾರದಿಂದ ಸೋಮವಾರದವರೆಗೆ ವೀಕೆಂಡ್ ಕಫ್ಯೂ೯ ಜಾರಿ ( ಎರಡು ವಾರಗಳ ವರೆಗೆ )
( night Curfew )

ಮದುವೆ ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ

ಹೊರಾಂಗಣ ಮದುವೆಗೆ 200 ಜನಕ್ಕೆ ಮಾತ್ರ ಅವಕಾಶ

ಸರ್ಕಾರಿ ಕಚೇರಿ ಐದು ದಿನ ಮಾತ್ರ ( ರಾಜ್ಯಾದ್ಯಂತ )

ದೇವಸ್ಥಾನಗಳಿಗೆ 50 ಜನಕ್ಕೆ ಮಾತ್ರ ಅವಕಾಶ

ಸಭೆ, ಸಮಾರಂಭ, ಪ್ರತಿಭಟನೆ ಸೇರಿದಂತೆ ಕಾರ್ಯಕ್ರಮ ಮಾಡುವಂತಿಲ್ಲ

ಅಂತ್ಯಕ್ರಿಯೆಯಲ್ಲಿ ನಿಗದಿತ ಜನ ಸೇರುವಂತೆ ನಿಯಮ

ಬೇರೆ ರಾಜ್ಯಗಳಿಂದ ಬರುವವರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯ

ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ

ಮಂಗಳವಾರ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ತಜ್ಞರ ಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದ್ದು ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ವೀಕೆಂಡ್ ಕಫ್ಯೂ೯ ಮಾಡಿ ಆದೇಶ ಹೊರಡಿಸಿದೆ. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್ ಕೊರೊನಾ ಹೋಗಲಾಡಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *