ದೂರವಾಣಿ ಸಲಹಾ ಸಮಿತಿಗೆ ಸವಿತಾ ಹೆಬ್ಬಾರ ನೇಮಕ
ಬೆಳಗಾವಿ : ಭಾರತೀಯ ದೂರವಾಣಿ ಸಲಹಾ ಸಮಿತಿ (ಬಿಎಸ್‌ಎನ್‌ಎಲ್) ಸದಸ್ಯರನ್ನಾಗಿ ನಗರದ ಬಿಜೆಪಿಯ ಸವಿತಾ ಸುಭಾಷ ಹೆಬ್ಬಾರ ಇವರನ್ನು ನೇಮಕ ಮಾಡಿ ಎಡಿಜಿ ಎಸ್.ಕೆ ಬಾಲ್ಯನ್ ಅವರು ಆದೇಶ ಹೊರಡಿಸಿದ್ದಾರೆ.
ಭಾಗ್ಯನಗರ ನಿವಾಸಿಯಾದ ಸವಿತಾ ಹೆಬ್ಬಾರ ಇವರು ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಂಸ್ಥೆ ಅಧ್ಯಕ್ಷರಾಗಿ ವಿವಿಧ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಹುದ್ದೆ ಅಲಂಕರಿಸುವ ಮೂಲಕ ಪಕ್ಷ ಸೇವೆ ಮಾಡಿದ್ದಾರೆ. ಇವರ ಕೆಲಸವನ್ನು ಗುರುತಿಸಿ ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ಈ ಜವಾಬ್ದಾರಿ ನೀಡಿದ್ದಾರೆ.
ಇವರಿಗೆ ನೀಡಿರುವ ಈ ಜವಾಬ್ದಾರಿ ಜನೇವರಿ 13, 2024 ರವರೆಗೆ ಮುಂದುವರಿಯುತ್ತದೆ. ಈ ನಿಮಿತ್ಯ ಸಂಸದೆ ಮಂಗಲ ಸುರೇಶ ಅಂಗಡಿ ಇವರು ಸವಿತಾ ಹೆಬ್ಬಾರ ಇವರಿಗೆ ಶನಿವಾರ ನೇಮಕಾತಿ ಆದೇಶ ಪತ್ರ ನೀಡಿ ಗೌರವಿಸಿದರು.