
ಪಿಎಸ್ಐ ಸಾಹೇಬ್ರ ಬರಬೇಕೆಂದು ಮಹಿಳಾ ಶೌಚಾಲಯದಲ್ಲಿ ಕೂತ ವ್ಯಕ್ತಿ ಯಾರು… ?

ಬೆಳಗಾವಿ : ನನಗೆ ಜೀವ ಬೆದರಿಕೆ ಇದೆ. ಪಿಎಸ್ ಐ ಸಾಹೇಬರು ಬರುವವರೆಗೂ ನಾನು ಹೊರಗಡೆ ಬರುವುದಿಲ್ಲ ಎಂದು ಭಾನುವಾರ ಬೆಳ್ಳಂ ಬೆಳಗ್ಗೆ ಕನ್ನಡ ಸಾಹಿತ್ಯ ಭವನದ ಮಹಿಳಾ ಶೌಚಾಲಯದಲ್ಲಿ ವ್ಯಕ್ತಿಯೊರ್ವ ಕಿಟಕಿ ಗಾಜು ಒಡೆದು ಗ್ಲಾಸಿನ್ ಚೂರುಗಳನ್ನು ಹಿಡಿದುಕೊಂಡು ಹುಚ್ಚಾಟ ಮಾಡಿದ ಘಟನೆ ನಡೆದಿದೆ.
ಕನ್ನಡ ಸಾಹಿತ್ಯ ಭವನದ ಮಹಿಳಾ ಶೌಚಾಲಯದಲ್ಲಿ ಬೆಳಗ್ಗೆ 7 ಗಂಟೆಗೆ ಮಹಿಳಾ ಶೌಚಾಲಯ ಪ್ರವೇಶಿಸಿ ಲಾಕ್ ಮಾಡಿಕೊಂಡ ವ್ಯಕ್ತಿಯನ್ನು ಕಿತ್ತೂರು ತಾಲೂಕಿನ ಗ್ರಾಮದವನ್ನು. ಪಿಎಸ್ ಐ ಬರಬೇಕು. ನನ್ನ ಪತ್ನಿ ಜಿಲ್ಲಾಸ್ಪತ್ರೆಯ ಹೆರಿಗೆ ವಾಡ್೯ನಲ್ಲಿದ್ದಾಳೆ. ನನ ಮಗು ನೋಡಬೇಕು. ನನಗೆ ಜೀವ ಬೇದರಿಕೆ ಇದೆ. ಆದ್ದರಿಂದ ಇಲ್ಲಿ ಬಂದು ಕುಳಿತಿದ್ದೇನೆ. ನನಗೆ ಪಿಎಸ್ಐ ಸಾಹೇಬರು ಬರಬೇಕೆಂದು ಪಟ್ಟು ಹಿಡಿದು ಸುಮಾರು ಎರಡೂವರೆ ಗಂಟೆ ಶೌಚಾಲಯದಲ್ಲಿ ಕುಳಿತುಕೊಂಡಿದ್ದ.
ಸಾಹಿತ್ಯ ಭವನದಲ್ಲಿ ವಾರದ ರಜೆ ಇರುವುದರಿಂದ ಸಹಜವಾಗಿ ಸಂಗೀತ ತರಗತಿಗಳು ನಡೆಯುತ್ತಿರುತ್ತವೆ. ನೂರಾರು ಸಂಖ್ಯೆಯಲ್ಲಿ ಬಾಲಕ, ಬಾಲಕಿಯರು ಬಂದಿರುತ್ತಾರೆ. ಇತನ ಹುಚ್ಚಾಟ ನೋಡಿ ಕೆಲವರು ಗಾಬರಿಯಾಗಿದ್ದರು. ಸ್ಥಳದಲ್ಲಿದ್ದ ಪೊಲೀಸರು ಆತನ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಾರ್ಕೆಟ್ ಪಿಎಸ್ ಐ ವಿಠ್ಠಲ ಹಾವನ್ನವರ್ ಆಗಮಿಸಿ ಶೌಚಾಲಯದಲ್ಲಿದ್ದ ಅಡುಗಿ ಕುಳಿತ್ತಿದ್ದ ವ್ಯಕ್ತಿಯನ್ನು ಮನವೊಲಿಸಿ ಹೊರಗಡೆ ತರಲಾಯಿತು.