
ರೋಹಿತ್ ಜೊತೆ ಕೊಹ್ಲಿ ಅಬ್ಬರಿಸಿದರೆ ಭಾರತದ ಗೆಲುವು ಇನ್ನೂ ಸುಲಭ

ಬೆಂಗಳೂರು : T-20 ವಿಶ್ವಕಪ್ ಪೈನಲ್ ಪಂದ್ಯಕ್ಕೆ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತರತೆಯಿಂದ ಕಾಯುತ್ತಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿ ಆಗಲಿರುವ ಈ ಪಂದ್ಯದಲ್ಲಿ ವಿಶ್ವದ ಎರಡು ಬಲಿಷ್ಠ ತಂಡಗಳ ನಡುವೆ ಕಾಳಗ ಏರ್ಪಡಲಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಶಕ್ತಿಶಾಲಿಯಾಗಿರುವ ಭಾರತ ತಂಡಕ್ಕೆ ಸಧ್ಯ ವಿರಾಟ್ ಕೊಹ್ಲಿ ಅವರ ರನ್ ಬರ ಚಿಂತೆಯಾಗಿದೆ. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ಫಾರ್ಮ್ ನಲ್ಲಿದ್ದು ವಿರಾಟ್ ಕೊಹ್ಲಿ ಸಾಥ್ ನೀಡಿದರೆ ಭಾರತಕ್ಕೆ ಮತ್ತಷ್ಟು ಶಕ್ತಿ ವೃದ್ಧಿಯಾದಂತೆ.
ಭಾರತದ ಪರ ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಹಾಗೂ ಸೂರ್ಯಕುಮಾರ್ ಯಾದವ್ ಈಗಾಗಲೇ ಉತ್ತಮ ಪ್ರದರ್ಶನ ತೋರಿದ್ದು, ವಿರಾಟ್ ಕೊಹ್ಲಿ, ಶಿವಂ ದುಭೆ ಹಾಗೂ ಜಡೆಜಾ ಬ್ಯಾಟಿಂಗ್ ಕೈಚಳ ತೋರಿದರೆ ಎದುರಾಳಿ ಬೌಲಿಂಗ್ ಚೆಚ್ಚಿ ಹಾಕುವುದರಲ್ಲಿ ಅನುಮಾನವೇ ಇಲ್ಲ.
ಭಾರತ ತಂಡ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿದ್ದು ಬೂಮ್ರಾ, ಅರ್ಶದೀಪ್, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ತೋರುತ್ತಿದ್ದು ಜಡೆಜಾ ವಿಕೆಟ್ ಬರ ಮುಂದುವರಿದಿದೆ. ಪೈನಲ್ ಪಂದ್ಯವಾದ ಹಿನ್ನಲೆಯಲ್ಲಿ ಅನುಭವಿ ಬೌಲರ್ ಮೊಹಮ್ಮದ್ ಸಿರಾಜ್ ಅವರು ಯಾರ ಜಾಗಕ್ಕೆ ಬರುತ್ತಾರೆ ಎಂಬುದು ಸದ್ಯದ ಕುತೂಹಲ.
ಭಾರತದ ಹಾಗೆಯೇ ಲೀಗ್ ಹಂತದಲ್ಲಿ ಯಾವುದೇ ಪಂದ್ಯ ಸೋಲದೆ ಪೈನಲ್ ತಲುಪಿರುವ ಸೌತ್ ಆಫ್ರಿಕಾ ತಂಡ ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ಹೊಂದಿದೆ. ಆರಂಭಿಕರಾಗಿ ಕಳೆದ ಪಂದ್ಯದಲ್ಲಿ ಲಯ ಕಂಡುಕೊಂಡಿರುವ ರೀಜಾ ಹೆಂಡ್ರಿಕ್ಸ್
ಆಟ ಆಫ್ರಿಕಾ ತಂಡಕ್ಕೆ ಆಸರೆ. ಕ್ಲಾಸೆನ್ ಬ್ಯಾಟಿಂಗ್ ಬಲ ಇದ್ದರೆ. ಬೌಲಿಂಗ್ ನಲ್ಲಿ ರಬಾಡಾ, ನೋಕಿಯಾ ಹಾಗೂ ಸ್ಪಿನ್ ನಲ್ಲಿ ಕೇಶವ್ ಮಹಾರಾಜ್ ಹಾಗೂ ಶಮ್ಸಿ ಇದ್ದಾರೆ.
ಪಂದ್ಯದ ಆರಂಭ – ರಾತ್ರಿ 8 ಗಂಟೆಗೆ