
ಗೆದ್ದ ಹಣ ಮೈದಾನದ ಸಿಬ್ಬಂದಿಗೆ ನೀಡಿ ಹೃದಯವಂತಿಕೆ ಮೆರೆದ ಮೊಹಮ್ಮದ್ ಸಿರಾಜ್

ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾಕಪ್ ಟೂರ್ನಿಯ ಪೈನಲ್ ಪಂದ್ಯದಲ್ಲಿ ಆರು ವಿಕೇಟ್ ಪಡೆಯುವ ಮೂಲಕ ಭಾರತೀಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ( Mohammad Siraj ) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದರು.
ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಬಂದ ಮೊತ್ತವನ್ನು ಶ್ರೀಲಂಕಾ ಕ್ರೀಡಾಂಗಣದ ಸಿಬ್ಬಂದಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಮೊಹಮ್ಮದ್ ಸಿರಾಜ್. ಈ ಘಟನೆಗೆ ಇಂದು ಸಾಕ್ಷಿಯಾಗಿದ್ದೇ ಭಾರತ ಹಾಗೂ ಶ್ರೀಲಂಕಾ ( IND Vs SL ) ನಡುವಿನ ಪಂದ್ಯ.
ಏಷ್ಯಾಕಪ್ ಪ್ರಾರಂಭವಾದಾಗಿನಿಂದ ನಿರಂತರ ಮಳೆಗೆ ಅನೇಕ ಪಂಧ್ಯಗಳು ಅರ್ಧಕ್ಕೆ ನಿಂತವು. ಈ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಟ ನಡೆಸಲು ಸಂಕಷ್ಟ ಪಡುವಂತಾಗಿತ್ತು. ಈ ಸಂದರ್ಭದಲ್ಲಿ ಮೈದಾನದ ಸಿಬ್ಬಂದಿ ಕಷ್ಟಪಟ್ಟು ಪ್ಲಾಸ್ಟಿಕ್ ಹಾಕುವ ಮೂಲಕ ಆಟ ನಡೆಯುವಂತೆ ಮಾಡಿದ್ದರು.
ಕೆಲವು ಸಂದರ್ಭಗಳಲ್ಲಿ ಅರ್ಧ ಗಂಟೆಗೆ ಒಮ್ಮೆಯಾದರೂ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿಯೂ ಸಿಬ್ಬಂದಿಗಳು ಕವರ್ ಹಾಕುವ ಹಾಗೂ ತಗೆಯುವ ಮೂಲಕ ತಮ್ಮ ಕಾಯಕ ನಿರಂತರವಾಗಿ ಮಾಡಿ ಮೈದಾನ ರಕ್ಷಣೆ ಮಾಡಿದ್ದರು.
ಮೊಹಮ್ಮದ್ ಸಿರಾಜ್ ಪಂದ್ಯದ ಬಳಿಕ ಮಾತನಾಡಿ. ಸಂಪೂರ್ಣ ಸರಣಿ ನಡೆಯಲು ಮೈದಾನದ ಸಿಬ್ಬಂದಿಗಳ ಪಾತ್ರ ಬಹು ಮುಖ್ಯವಾಗಿತ್ತು. ಎಷ್ಟೇ ಮಳೆ ಬಂದರು ಆಟವನ್ನು ರಕ್ಷಿಸಿದ್ದಾರೆ. ಈ ಹಿನ್ನಲೆಯಲ್ಲಿ ತಮಗೆ ಬಹುಮಾನವಾಗಿ ಬಂದ 4.15 ಲಕ್ಷ ರೂ. ಹಣವನ್ನು ಸಿಬ್ಬಂದಿಗೆ ನೀಡಿದ್ದಾರೆ.
ಕ್ಯಾಂಡಿ ಹಾಗೂ ಕೊಲಂಬೊ ದಲ್ಲಿ ಈ ಬಾರಿ ಏಷ್ಯಾಕಪ್ ಪಂದ್ಯಾವಳಿ ಜರುಗಿದ್ದವು. ಹಲವು ಪಂದ್ಯದಲ್ಲಿ ಮಳೆ ಅಡಚಣೆ ಉಂಟಾಗಿತ್ತು. ಇನ್ನೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮಳೆ ಆದ ಕಾರಣ ಎರಡು ದಿನಗಳ ವರೆಗೆ ಪಂದ್ಯ ನಡೆದಿದ್ದು ಒಂದು ವಿಶೇಷ.