Select Page

ಸಿಎಂ ಕುರ್ಚಿಗೆ ಟವೆಲ್ ಹಾಕಿದ ಸಚಿವ ಸತೀಶ್ ಜಾರಕಿಹೊಳಿ ; ಸಾಹುಕಾರ್ ಸಿಎಂ ಬಾಂಬ್

ಸಿಎಂ ಕುರ್ಚಿಗೆ ಟವೆಲ್ ಹಾಕಿದ ಸಚಿವ ಸತೀಶ್ ಜಾರಕಿಹೊಳಿ ; ಸಾಹುಕಾರ್ ಸಿಎಂ ಬಾಂಬ್

ಬೆಳಗಾವಿ : ಸಿಎಂ ಕುರ್ಚಿ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಚರ್ಚೆಗಳು ಜೋರಾದ ಹೊತ್ತಿನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಕುರಿತು ಬಹಿರಂಗವಾಗಿಯೇ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿಕ್ಕೋಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಇವರು. 2028 ರ ಚುನಾವಣೆ ಬಳಿಕ ನಾನು ಸಿಎಂ ಅಭ್ಯರ್ಥಿ. ಅವತ್ತಿನ ಪರಿಸ್ಥಿತಿ ಸನ್ನಿವೇಶ ನೋಡಿಕೊಂಡು ನಾನು ಕ್ಲೇಮ್ ಹಾಕುತ್ತೇನೆ. ಆದರೆ ಈಗಲ್ಲ. ಎಂದ ಅವರು, ಬೆಳಗಾವಿ ಜಿಲ್ಲೆ ವಿಭಜನೆ ಮಾಡುವ ಕುರಿತು ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ ಧ್ವನಿ ಕೂಡ ಎತ್ತಿದ್ದೇನೆ. ಅವಕಾಶ ಬಂದೆ ಬರುತ್ತೆ ಎಂಬುದು ನಂಬಿಕೆ ಇದೆ ಕಾದು ನೋಡಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಕಾದು ನೋಡೊಣ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದು ಹೋದ ಅಧ್ಯಾಯ. ನಮ್ಮ ಪಕ್ಷದ ಮುಖಂಡರು ದೆಹಲಿ ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ. ಸದ್ಯ ಈ ವಿಷಯ ಮುಂದುವರೆಸುವು ಅವಶ್ಯಕತೆ ಇಲ್ಲ. ಯಾರ ಏನೆ ಹೇಳಿದರೂ ಸಿಎಂ ಬದಲಾವಣೆ ಮುಗಿದುಹೋದ ಅಧ್ಯಾಯ. ಈ ವಿಷಯ ಹೈಕಮಾಂಡ ಹಾಗೂ ಪಕ್ಷ ತೀರ್ಮಾನ ಮಾಡುವ ವಿಷಯ. ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ ಎಂದು ಹೇಳಿದರು.

ಸಿಎಂ ಬದಲಾವಣೆ ಕುರಿತು ಯಾವುದೋ ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಮಹತ್ವ ಇಲ್ಲ. ಇದು ಪಕ್ಷದ ವೇದಿಕೆಯಲ್ಲೆ ಚರ್ಚೆ ಆಗಬೇಕು ಎಂದ ಅವರು, ಡಿಸಿಎಂ ಗಳ ಹೆಚ್ಚಳ ಮಾಡುವ ವಿಚಾರ ಚುನಾವಣೆಗೂ ಮುಂಚೆ ಕೂಗು ಇತ್ತು. ಅದನ್ನ ಮಾಡಬೇಕಾ ಬೇಡವಾ ಎನ್ನುವ ವಿಚಾರ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

ದಲಿತರು ಸಮುದಾಯದವರು ಮುಖ್ಯಮಂತ್ರಿ ಆಗುವ ವಿಚಾರ ಮಾತನಾಡಿದ ಅವರು, ಇದನ್ನ ನನ್ನ ಬಳಿ ಕೇಳಬೇಡಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನೆ ಕೇಳಿ. ನಮ್ ಕೆಲಸ ಹೊಸ ಕೆಲಸ ಅಭಿವೃದ್ಧಿ ಬಗ್ಗೆ ಕೇಳಿ ಅಷ್ಟಕ್ಕೇ ಮಾತ್ರ ಸೀಮಿತ ನಾನು ಎಂದ ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!