ಹೆಬ್ಬಾಳ್ಕರ್ ವಿಷಕನ್ಯೆ : ಟಿಕೆಟ್ ಕೊಡದಂತೆ ಡಿಕೆಶಿ ಹೇಳಿದ್ದ – ಸಾಹುಕಾರ್ ಬಾಂಬ್
ಬೆಳಗಾವಿ : ಹೆಬ್ಬಾಳ್ಕರ್ ಒಬ್ಬ ವಿಷಕನ್ಯೆ ಅವರಿಗೆ ಟಿಕೆಟ್ ನೀಡದಂತೆ ಅವತ್ತೆ ಡಿ.ಕೆ ಶಿವಕುಮಾರ್ ಹೇಳಿದ್ದ ಆದರೆ ನಾನು ಟಿಕೆಟ್ ಕೊಡಿಸಿದೆ. ಕಾಂಗ್ರೆಸ್ ಮುಳುಗಿಸಲು ಡಿಕೆಶಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಕಾರಣ ಎಂದು ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಈ ಹಿಂದೆ ಡಿಕೆಶಿ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೇವು. ನಾನು ಪಕ್ಷ ಬಿಡುವ ಸಂದರ್ಭದಲ್ಲಿ ಅವರ ಧರ್ಮಪತ್ನಿ ಕೂಡಾ ಕಾಂಗ್ರೆಸ್ ತೊರೆಯದಂತೆ ಹೇಳಿದ್ದರು. ಆ ಹಿಂದೆ ಚುನಾವಣೆ ಸಂದರ್ಭದಲ್ಲಿ ಹೆಬ್ಬಾಳ್ಕರ್ ಗೆ ಟಿಕೆಟ್ ಕೊಡುವುದು ಬೇಡ ಎಂದು ಡಿಕೆಶಿ ಹೇಳಿದ್ದರು. ಆದರೆ ನಾನೇ ಕೊಡಿಸಿರುವುದಾಗಿ ಹೇಳಿದ್ದಾರೆ.
ಡಿಕೆಶಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನೇರ ಆರೋಪ ಮಾಡಿರುವ ರಮೇಶ್ ಜಾರಕಿಹೊಳಿ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ನಾನು ಹೆಬ್ಬಾಳ್ಕರ್ ಕುರಿತು ಕೆಟ್ಟದಾಗಿ ಮಾತನಾಡಿರುವ ಆಡಿಯೋ ಎಡಿಟ್ ಮಾಡಲಾಗಿದೆ. ಬರುವ ಚುನಾವಣೆಯಲ್ಲಿ ಅದನ್ನು ಹೊರಬಿಡುತ್ತಾರೆ. ಮುಂದೆ ಏನಾದರು ಆಡಿಯೋದಿಂದ ಜಾತಿ ಸಂಘರ್ಷ ಉಂಟಾದರೆ ನೇರ ಹೊಣೆ ಹೆಬ್ಬಾಳ್ಕರ್ ಹಾಗೂ ಡಿ.ಕೆ ಶಿವಕುಮಾರ್ ಎಂದು ಆರೋಪಿಸಿದರು.