Select Page

ಕನ್ನಡಿಗರ ಮೇಲೆ ದರ್ಪ ಮೆರೆದಿದ್ದ ಡಿಸಿಪಿ ರವೀಂದ್ರ ಗಡಾದಿ ಎತ್ತಂಗಡಿ

ಕನ್ನಡಿಗರ ಮೇಲೆ ದರ್ಪ ಮೆರೆದಿದ್ದ ಡಿಸಿಪಿ ರವೀಂದ್ರ ಗಡಾದಿ ಎತ್ತಂಗಡಿ

ಬೆಳಗಾವಿ :  ಕನ್ನಡ ಹೋರಾಟಗಾರರ ಮೇಲೆ ದರ್ಪ ತೊರಿ ವಿವಾದಕ್ಕೆ ಕಾರಣವಾಗಿದ್ದ  ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಹಾಗೂ ಮಾರ್ಕೆಟ್ ಉಪವಿಭಾಗದ ಎಸಿಪಿ ಎನ್.ವಿ.ಬರಮನಿ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ನಗರ ಪೊಲೀಸ್‌ನ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಅವರನ್ನು ಎತ್ತಂಗಡಿ ಮಾಡಿದ್ದು, ತೆರವಾದ ಸ್ಥಾನಕ್ಕೆ  ಮೈಸೂರಿನ ತರಬೇತಿ ಶಾಲೆಯ  ಪ್ರಾಂಶುಪಾಲ ಶೇಖರ ಎಚ್. ಟೆಕ್ಕನ್ನವರ ಅವರನ್ನು ನೇಮಕ ಮಾಡಲಾಗಿದೆ. ಡಿಸಿಪಿಯಾಗಿದ್ದ ರವೀಂದ್ರ ಗಡಾದಿ ಅವರನ್ನು ಬೆಂಗಳೂರಿನ ಕಮಾಂಡ ಸೆಂಟರನ ಡಿಸಿಪಿ ಸ್ಥಾನ ತೋರಿಸಲಾಗಿದೆ. ಮಾರ್ಕೆಟ್ ಉಪವಿಭಾಗದ ಎಸಿಪಿಯಾಗಿದ್ದ ನಾರಾಯಭ ಬರಮನಿ ಅವರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ಡಿವೈಎಸ್‌ಪಿ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

ತೆರವಾದ ಸ್ಥಾನಕ್ಕೆ  ರಾಜ್ಯಗುಪ್ತ ವಾರ್ತೆಯಿಂದ ಪ್ರಶಾಂತ್ ಸಿದ್ದನಗೌಡರ ನೇಮಕ ಮಾಡಲಾಗಿದೆ.    ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿಯಾಗಿದ್ದ  ಎಸ್.ವಿ ಗಿರೀಶ ಅವರನ್ನು ಹುಬ್ಬಳ್ಳಿ ಧಾರವಾಡ ನಗರದ ಅಪರಾಧ ವಿಭಾಗದ ಎಸಿಪಿಯನ್ನಾಗಿ, ತೆರವಾದ ಸ್ಥಾನಕ್ಕೆ ಬೆಂಗಳೂರು ನಗರ ಸಂಚಾರ ಪಶ್ಚಿಮ ಉಪವಿಭಾಗದ ಎಸಿಪಿ ಗೋಪಾಲಕೃಷ್ಣ ಬಿ ಗೌಡರ ನೇಮಕ ಮಾಡಲಾಗಿದೆ.

ಇನ್ನೂ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಡಿಸಿಆರ್‌ಬಿ ವಿಭಾಗದ ಡಿವೈಎಸ್‌ಪಿ ವಿರೇಶ ದೊಡ್ಡಮನಿ ಅವರನ್ನು ಬಳ್ಳಾರಿ ವಲಯದ ಐಜಿಪಿ ಕಚೇರಿಗೆ, ತೆರವಾದ ಸ್ಥಾನಕ್ಕೆ ಕಲಬುರಗಿ ಈಶಾನ್ಯ ವಲಯದ ಐಜಿಪಿ ಕಚೇರಯಿಂದ ಜೇಮ್ಸ್ ಲಾಯ್ ಜೇವಿಯರ್ ಮೇನೆಜಸ್ ಅವರನ್ನು ಬೆಳಗಾವಿ ಡಿಸಿಆರ್‌ಬಿ ವಿಭಾಗದ ಡಿವೈಎಸ್‌ಪಿ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!