Breaking : ಸಿಡಿ ಸೇಡಿಗೆ ಆಡಿಯೋ ಬಾಂಬ್ ಸ್ಪೋಟ : ಇವತ್ತು ಸಾಹುಕಾರ್ ಮಹತ್ವದ ಸುದ್ದಿಘೋಷ್ಠಿ
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಡಿಯೋ ಬಾಂಬ್ ಸುದ್ದಿ ಸಂಚಲನ ಹುಟ್ಟು ಹಾಕಿದ್ದು ಸಿಡಿ ಬಾಂಬ್ ಪ್ರತ್ಯುತ್ತರವಾಗಿ ಸಾಹುಕಾರ್ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ಸಿಡಿಸಲು ಸಿದ್ಧತೆ ನಡೆಸಿದ್ದಾರೆ.
ಇಂದು ಬೆಳಗಾವಿಯಲ್ಲಿ ನಡೆಯಲಿರುವ ಮಹತ್ವದ ಸುದ್ದಿಘೋಷ್ಠಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ಸಿಡಿಸಲಿದ್ದು, ಸಿಡಿ ಘಟನೆ ಸುತ್ತಲೂ ಸಧ್ಯ ಈ ಹೊಸ ಆಡಿಯೋ ಬಾಂಬ್ ಸುತ್ತಿಕೊಳ್ಳಲಿದೆ.
ನೇರವಾಗಿ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದು ಅವರ ರಾಜಕೀಯ ಭವಿಷ್ಯ ಅಂತ್ಯ ಮಾಡುವುದು ನಾನೇ ಎಂದು ಈಗಾಗಲೇ ಸವಾಲ್ ಹಾಕಿದ್ದಾರೆ. ಸಧ್ಯ ಸಿಡಿಸಲಿರುವ ಆಡಿಯೋ ಬಾಂಬ್ ಯಾವ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.