ಆ ಒಂದು ಬಿಟ್ಟಿ ಸಲಹೆ ಏಳು ಜನರ ಪ್ರಾಣಕ್ಕೆ ಕಂಠಕವಾಯ್ತು
ಬೆಳಗಾವಿ : ಹೊಸ ಮನೆ ಕಟ್ಟಲು ಹಳೆ ಮನೆ ತೆರವು ಮಾಡುವಾಗ ಇಂದು ಅಮವಾಸ್ಯೆ ನಾಳೆ ಮನೆ ತೆರವು ಮಾಡಿ ಎಂದು ಜನರ ಬಿಟ್ಟಿ ಸಲಹೆ ಒಂದೇ, ಈ ಏಳು ಜನರ ಪ್ರಾಣಕ್ಕೆ ಕಂಠಕವಾಗಿದ್ದು ವಿಪರ್ಯಾಸ.
ಹೌದು ಜಿಲ್ಲೆಯ ಬಡಾಲ ಅಂಕಲಗಿ ಗ್ರಾಮದಲ್ಲಿ ಬುಧವಾರ ಮನೆ ಗೋಡೆ ಕುಸಿದು ಏಳು ಜನ ಮೃತಪಟ್ಟ ದುರ್ಘಟನೆ ಹಿಂದಿನ ರೋಚಕ ಕಥೆಗಳು ಈಗ ಹೊರಬರುತ್ತಿವೆ. ಮನೆ ತೆರವು ಮಾಡಲು ಜೇಸಿಬಿ ಕೂಡಾ ಬಂದಿತ್ತು. ಇನ್ನೇನು ಹಳೆ ಮನೆ ಗೋಡೆ ತೆರವು ಮಾಡುವಷ್ಟರಲ್ಲಿ ನೆರೆ ಹೊರೆಯವರು ಇಂದು ಅಮವಾಸ್ಯೆ ನಾಳೆ ತೆರವು ಮಾಡಿ ಎಂಬ ಬಿಟ್ಟಿ ಸಲಹೆ ಈ ಘಟನೆಗೆ ಕಾರಣವಾಯಿತು ಎನ್ನುತ್ತಾರೆ ಸ್ಥಳೀಯರು.
ಭೀಮಪ್ಪ ಖನಗಾವಿ ಕುಟುಂಬ ಗುರುವಾರ ತಡರಾತ್ರಿ ಹಳೆ ಮನೆ ಗೋಡೆ ಕುಸಿದಿದ್ದನ್ನು ವೀಕ್ಷಣೆ ಮಾಡಲು ಹೋದ ಸಂದರ್ಭದಲ್ಲಿ, ಮನೆಯ ಮತ್ತೊಂದು ಗೋಡೆ ಬಿದ್ದು ಏಳು ಜನ ಮೃತಪಟ್ಟಿದ್ದರು. ಗಂಗವ್ವ ಖನಗಾವಿ ( 50 ) ಸತ್ಯವ್ವ ಖನಗಾವಿ ( 45 ) ಪೂಜಾ ಖನಗಾವಿ ( 8 ) ಸವಿತಾ ಖನಗಾವಿ ( 28 ) ಲಕ್ಷ್ಮೀ (15) ಕೇಶವ್ ಖನಗಾವಿ (8) ಅರ್ಜುನ್ ಎಂದು ಗುರುತಿಸಲಾಗಿದೆ.