ಹತ್ತನೇ ತರಗತಿ ಫೇಲ್ ಆಗಿದ್ದರು ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯನ ಕ್ಲಿನಿಕ್ ಸೀಜ್
ಬೆಳಗಾವಿ : ಹತ್ತನೇ ತರಗತಿ ಫೇಲ್ ಆಗಿದ್ದರು ವೈದ್ಯರ ವೇಶದಲ್ಲಿ ಚಿಕಿತ್ಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ನಕಲಿ ವೈದ್ಯನ ಆಸ್ಪತ್ರೆ ಮೇಲೆ ಆರೋಗ್ಯ ಅಧಿಕಾರಿಗಳು ಗುರುವಾರ ದಾಳಿ ಮಾಡಿ ಆಸ್ಪತ್ರೆ ಸೀಜ್ ಮಾಡಿದ್ದಾರೆ.
ಬೆಳಗಾವಿ ಬಾಗಲಕೋಟೆ ಹೆದ್ದಾರಿಗೆ ಹೊಂದಿಕೊಂಡಿರುವ ಮಾರುತಿ ನಗರದಲ್ಲಿ ಸಮೃದ್ಧಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಅಡಿವೆಪ್ಪ ಆಡಿನವರ್ ಎಂಬಾತನ ಆಸ್ಪತ್ರೆ ಮೇಲೆ ಬೆಳಗಾವಿ ಆರೋಗ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಕ್ಲಿನಿಕ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.