Select Page

Advertisement

ಶಾಹೂನಗರದಲ್ಲಿ ಶ್ರೀ ಬನಶಂಕರಿ ಮಹಿಳಾ ಸ್ವ ಸಹಾಯ ಸಂಘ ಉದ್ಘಾಟನೆ

ಶಾಹೂನಗರದಲ್ಲಿ ಶ್ರೀ ಬನಶಂಕರಿ ಮಹಿಳಾ ಸ್ವ ಸಹಾಯ ಸಂಘ ಉದ್ಘಾಟನೆ

ಬೆಳಗಾವಿ : ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶ್ರೀ ಬನಶಂಕರಿ ಮಹಿಳಾ ಸ್ವ ಸಹಾಯ ಸಂಘ ಉದ್ಘಾಟನೆ ನೆರವೇರಿತು.

ಶನಿವಾರ ಶಾಹೂನಗರದ ಗಣೇಶ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಪುತ್ರ ಬಾಗೇವಾಡಿ ಅವರು  ಶ್ರೀ ಬನಶಂಕರಿ ಮಹಿಳಾ ಸ್ವ ಸಹಾಯ ಸಂಘ ಉದ್ಘಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು. ಮಹಿಳೆರು ಸಮಾಜಮುಖಿಯಾಗಿ ಬೆಳೆಯಲು ಸ್ವ ಸಹಾಯ ಸಂಘಗಳ ಸಹಾಯ ಅಪಾರ. ಈ ನಿಟ್ಟಿನಲ್ಲಿ ಸರಕಾರ ಕೂಡಾ ಹಲವು ಯೋಜನೆ ಕೈಗೊಂಡಿದ್ದು ಇದರ ಲಾಭ ಪ್ರತಿಯೊಬ್ಬ ಮಹಿಳೆಯರು ಪಡೆಯಬೇಕು ಎಂದರು.

ಇಂದಿನ ದಿನಮಾನದಲ್ಲಿ ಪುರುಷರಷ್ಟೇ ಮಹಿಳೆಯರು ಸಮಾನ ಶಕ್ತಿ ಹೊಂದಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಅಪಾರವಾಗಿದ್ದು, ಮಹಿಳೆಯರು ಸಂಘಟಕರಾಗಿ ಬೆಳೆದಾಗ ಮಾತ್ರ ಸರ್ಕಾರದ ಆಶಯ ಈಡೇರಿದಂತೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ ಜಯಶ್ರೀ ಸೂರ್ಯವಂಶಿ. ನಮ್ಮ ಸಂಸ್ಥೆಯ ಮುಖಾಂತರ ಈಗಾಗಲೇ ಹಲವು ಸಮಾಜಪರ ಕಾರ್ಯ ಕೈಗೊಂಡಿದ್ದೇವೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಬನಶಂಕರಿ ಮಹಿಳಾ ಸ್ವ ಸಹಾಯ ಸಂಘ ಸ್ಥಾಪಿಸಲಾಗಿದ್ದು ಇದರ ಉಪಯೋಗ ಸಂಘದ ಸದಸ್ಯರು ಪಡೆಯಬೇಕು ಎಂದರು.

ಈ‌ ಸಂದರ್ಭದಲ್ಲಿ ಉಪ ಮೇಯರ್ ರೇಷ್ಮಾ ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓ ಚಂದ್ರಶೇಖರ ಸುಖಸಾರೆ, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ಸಫಲ ನಾಗರತ್ನ, ಪಿಎಸ್ಐ ಮಂಜುನಾಥ ಭಜಂತ್ರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷೆ ರೂಪಾ ಕಲಿಗಾಣ, ಸಮಾಜ ಸೇವಕಿ ರೂಪಾ ಹೊಸಕೋಟೆ, ನಗರ ಸೇವಕ ಶ್ರೇಯಸ್ ನಾಕಾಡೆ ಸೇರಿದಂತೆ ಶಾಹೂನಗರ ನಿವಾಸಿಗಳು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *