Select Page

Advertisement

ಬೆಳಗಾವಿ ಉತ್ತರ ಅಭಿವೃದ್ಧಿಗಾಗಿ ಚುನಾವಣಾ ಸ್ಪರ್ಧೆ – ಪ್ರವೀಣ ಹಿರೇಮಠ

ಬೆಳಗಾವಿ ಉತ್ತರ ಅಭಿವೃದ್ಧಿಗಾಗಿ ಚುನಾವಣಾ ಸ್ಪರ್ಧೆ – ಪ್ರವೀಣ ಹಿರೇಮಠ

ಬೆಳಗಾವಿ ಉತ್ತರ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅಭ್ಯರ್ಥಿ‌ ಪ್ರವೀಣ ಹಿರೇಮಠ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾರ್ಧನ ರೆಡ್ಡಿಯವರ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು ತತ್ವದಡಿ ಕಟ್ಟಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಆಕರ್ಷಿತನಾಗಿ ಈ ಬಾರಿ ಕಣಕ್ಕಿಳಿಯಲು ನಿಶ್ಚಯಿಸಿದ್ದೇನೆ ಎಂದರು.

ಪ್ರವೀಣ ಹಿರೇಮಠರವರು ಯುನೈಟೆಡ ಕಿಂಗ್ಡಮನ ನಾರಧನ್ ಮರೈನ್ ಮ್ಯಾನೇಜ್ಮೆಂಟ್ (Northern Marine management pvt ltd)ನಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದು ಸುಮಾರು 86 ದೇಶಗಳನ್ನು ಸುತ್ತಿ ಅಲ್ಲಿಯ ಜನ ಜೀವನ, ಅಲ್ಲಿನ ಮೂಲಭೂತ ಸೌಕರ್ಯ, ಟೆಕ್ನಾಲಜಿ , ಸರಕಾರಿ ಶಿಕ್ಷಣ ವ್ಯವಸ್ಥೆ ಮತ್ತು ಆಸ್ಪತ್ರೆ ವ್ಯವಸ್ಥೆ ಬಗ್ಗೆ ಅರಿತಿದ್ದಾರೆ ಎಂದು ತಿಳಿಸಿದ್ದಾರೆ.

ರಾಜಕೀಯ ಸೇರಲು ಕಾರಣ ತಿಳಿಸಿದ ಪ್ರವೀಣ ಅವರು ವಿಶ್ವಗುರು ಬಸವಣ್ಣವರ ಕನಸಿನ ನಾಡು ಕಲ್ಯಾಣ ರಾಜ್ಯ ಕಟ್ಟುವುದಾಗಿ ಗಾಲಿ ಜನಾರ್ಧನ ರೆಡ್ಡಿಯವರು ತಿಳಿಸಿದ್ದಾರೆ ಮತ್ತು ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಸಂದೇಶದಿಂದ ಪ್ರೇರಣೆ ಪಡೆದು ರೆಡ್ಡಿಯವರೊಂದಿಗೆ ಜನ ಸೇವೆ ಮಾಡುವುದಾಗಿ ಹೇಳಿದ್ದಾರೆ.

ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯಾಗಿ ಪರಿವರ್ತನೆಗೊಂಡ ಸಂದರ್ಭದಲ್ಲಿ
ನಾನು ನೋಡುತ್ತಿರುವ ನಗರ ಇದು ಸ್ಮಾರ್ಟ್ ಸಿಟಿ ಹೌದು ಅಥವಾ ಅಲ್ಲ ಎಂಬ ಭ್ರಮೆಯಲ್ಲಿ ನಾನಿದ್ದೇನೆ ಎಂದರು.

ಎಲ್ಲಿ ನೋಡಿದಲ್ಲಿ ಅವ್ಯವಸ್ಥೆಯ ಗೂಡಾಗಿರುವ ಬೆಳಗಾವಿ ನಗರ ರಾಜ್ಯ ಹಾಗೂ ದೇಶದಲ್ಲಿ ಪ್ರಸಿದ್ಧಿ ಪಡೆದಿರುವಂತ ನಗರ. ಈ ನಗರ ಹಾಗೂ ಇಲ್ಲಿಯ ರಾಜಕಾರಣವನ್ನು ಬದಲಾವಣೆ ಮಾಡಲು ನಮ್ಮಂತ ಯುವಕರು ರಾಜಕಾರಣಕ್ಕೆ ಬರಬೇಕೆಂದು ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಜನಾರ್ಧನ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲು ನಾವು ಸಿದ್ಧರಿದ್ದೇವೆ ಎಂದರು.

ಈ ವೇಳೆ ಮಂಜುನಾಥ ತಿಗಡಿ, ಅಣ್ಣಪ್ಪಗೌಡ ಪಾಟೀಲ ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!