ಗೋಕಾಕ್ ಸಾಹುಕಾರ್ ಕ್ಷೇತ್ರಕ್ಕೆ ಸಿಎಂ ಸಿದ್ದು ಆಗಮನ ; ಎಲ್ಲೆಲ್ಲಿ ಭೇಟಿ ಇಲ್ಲಿದೆ ಮಾಹಿತಿ
ಗೋಕಾಕ್ : ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ನಲುಗಿರುವ ಗೋಕಾಕ್ ಪಟ್ಟಣಕ್ಕೆ ಸೋಮವಾರ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಬರುವ ಆಗಸ್ಟ್. 5 ರಂದು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಲಿರುವ ಸಿಎಂ ಮಧ್ಯಾಹ್ನ ಗೋಕಾಕ್ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವರು.
ಕೃಷ್ಣ ನದಿ ಪ್ರವಾಹಕ್ಕೆ ಒಳಗಾದ ಕಾಗವಾಡ ತಾಲೂಕಿನ ಜೂಗಳ ಗ್ರಾಮಕ್ಕೆ ಭೇಟಿ ನೀಡಲಿದ್ದು, ನಂತರ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ವೀಕ್ಷಣೆ ಮಾಡಲಿದ್ದಾರೆ.