ಬೆಳಗಾವಿ ಪಾಲಿಕೆ ಆಯುಕ್ತರಾಗಿ ರುದ್ರೇಶ ಗಾಳಿ ನೇಮಕ
ಬೆಳಗಾವಿ : ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಎರಡೂವರೆ ವರ್ಷದ ಬಳಿಕ ನಡೆಯುತ್ತಿರುವ ಚುನಾವಣೆಯ ನಡುವೆ ನೂತನ ಪಾಲಿಕೆ ಆಯುಕ್ತರಾಗಿ ರುದ್ರೇಶ ಗಾಳಿ ಅವರಿಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಗಡಿ ಜಿಲ್ಲೆ ಬೀದರನ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ರುದ್ರೇಶ ಗಾಳಿ ಅವರಿಗೆ ಬೆಳಗಾವಿಯ ಮಹಾನಗರ ಪಾಲಿಕೆ ಆಯುಕ್ತರಾಗಿ ನಿಯುಕ್ತಿ ಮಾಡಿದೆ.
ಬೆಳಗಾವಿಯ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗೆ ಇದ್ದು, ನೇರವಾಗಿ ಸಿಎಂ ಬೊಮ್ಮಾಯಿ ಅವರು ಪಾಲಿಕೆ ಆಯುಕ್ತರಾಗಿ ನಿಯುಕ್ತಿಗೊಳಿಸಿದ್ದಾರೆ.