ಯಡಿಯೂರಪ್ಪ ಖರೀದಿಸಿದ ಹೊಸ ಕಾರಿನ ಬೆಲೆ ಎಷ್ಟು ಗೊತ್ತಾ….? ಏನಿದೆ ಈ ಕಾರಲ್ಲಿ
ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜಕೀಯ ಜಂಜಾಟಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡಿರುವ ರಾಜಾಹುಲಿ ಮಾಜಿ ಸಿಎಂ ಯಡಿಯೂರಪ್ಪ, ಬರುವ ಗಣೇಶೋತ್ಸವದ ನಂತರ ರಾಜ್ಯವ್ಯಾಪಿ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ಮಧ್ಯೆ ಪ್ರವಾಸಕ್ಕೆ ಐಶಾರಾಮಿ ಕಾರು ಖರೀದಿ ಮಾಡಿದ್ದು ಇದರ ವಿಶೇಷತೆಗಳೇನು ಎಂಬುದನ್ನು ನೋಡೋಣ ಬನ್ನಿ.
ಸುದೀರ್ಘ ರಾಜಕೀಯ ಅನುಭವವಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೋರಾಟಗಳ ಮೂಲಕವೇ ತಮ್ಮ ಸಾರ್ವಜನಿಕ ಜೀವನವನ್ನು ಕಟ್ಟಿಕೊಂಡು ಬೆಳೆದವರು. ತಮ್ಮ ಇಳಿ ವಯಸ್ಸಿನಲ್ಲಿಯೂ ಪಕ್ಷ ಸಂಘಟನೆ ಕುರಿತಾಗಿ ಆಸಕ್ತಿ ತೋರಿಸುತ್ತಿರುವ ಇವರ ನಡೆ ಯುವ ರಾಜಕಾರಣಿಗಳನ್ನು ನಾಚಿಸುವಂತಿದೆ. ಇಂತ ಸಂದರ್ಭದಲ್ಲಿ ದುಬಾರಿ ಬೆಲೆಯ ಕಾರು ಖರೀದಿ ಮಾಡುವ ಮೂಲಕ ರಾಜ್ಯ ಪ್ರವಾಸ ಕೈಗೊಳ್ಳುಲ್ಲಿದ್ದಾರೆ.
ಯಡಿಯೂರಪ್ಪ ಖರೀದಿ ಮಾಡಿರುವ ಕಾರು ಟೊಯೋಟಾ ವೆಲ್ ಫೈರ್ ( Toyata vellfire ). ಈ ಐಷಾರಾಮಿ ಕಾರಿನ ಶೋರೂಂ ಬೆಲೆ 87 ಲಕ್ಷ ಇದ್ದು ಎಲ್ಲಾ ರೀತಿಯ ತೆರಿಗೆ ಸೇರಿ ಸುಮಾರು 1 ಕೋಟಿ ಬೆಲೆಬಾಳುತ್ತದೆ. ಇಷ್ಟೊಂದು ದುಬಾರಿ ಕಾರಿನಲ್ಲಿ ಏನೆಲ್ಲ ವಿಶೇಷತೆ ಇದೆ ಅಂತಿರಾ…? ಜಪಾನ್ ಮೂಲದ ವಾಹನ ತಯಾರಿಕಾ ಕಂಪನಿಯಾದ ಟೊಯೋಟಾ ಸಂಸ್ಥೆಯ ವಾಹನಗಳಿಗೆ ಭಾರತದಲ್ಲಿ ಹೆಚ್ಚು ಬೇಡಿಕೆ ಇದೆ. ಯಡಿಯೂರಪ್ಪ ಖರೀದಿಸಿರುವ ಕಾರು ಕೂಡಾ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.
Toyata vellfire ಕಾರಿನಲ್ಲಿ ಏಳು ಜನ ಪ್ರಯಾಣಿಸಬಹುದಾಗಿದೆ. ಪ್ರಮುಖವಾಗಿ 10 ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಜೆಬಿಎಲ್ ಕಂಪನಿಯ ಸೌಂಡ್ ಸಿಸ್ಟಮ್ ಒಳಗೊಂಡಿದೆ. ಹಲವು ಬಣ್ಣಗಳ ಆ್ಯಂಬಿಯಂಟ್ ಲೈಟಿಂಗ್ ಹಾಗೂ ಮೂರು ಹಂತಗಳ ಆಟೋ ಕ್ಲೈಮೇಟ್ ಕಂಟ್ರೋಲ್ ಹಾಗೂ ಆಟೋಮ್ಯಾಟಿಕ್ ಎಲ್ ಇ ಡಿ ಹ್ಯಾಂಡಲೈಟ್ ಗಳನ್ನು ಈ ದುಬಾರಿ ಕಾರು ಹೊಂದಿದೆ.
ಸುರಕ್ಷತೆ ದೃಷ್ಟಿಯಿಂದ ಈ ಕಾರಿನಲ್ಲಿ ಹೆಚ್ಚಿನ ತಂತ್ರಜ್ಞಾನಗಳ ಅಳವಡಿಕೆ ಮಾಡಲಾಗಿದೆ. ಇಲ್ಲಿ ಏಳು ಏರ್ ಬ್ಯಾಗ್ ಗಳನ್ನು ನೀಡಲಾಗಿದೆ. ಜೊತೆಗೆ ಸೆನ್ಸಾರ್ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಆರಾಮವಾಗಿ ಕುಳಿತುಕೊಳ್ಳುವ ವ್ಯವಸ್ಥೆಯು ಈ ಕಾರಿನಲ್ಲಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 78 ವರ್ಷ ವಯಸ್ಸಾಗಿದ್ದು ಆರೋಗ್ಯದ ದೃಷ್ಟಿಯಿಂದ ಉಪಯುಕ್ತ ಕಾರನ್ನು ಅವರು ಆಯ್ಕೆಮಾಡಿಕೊಂಡಿದ್ದಾರೆ.
ಯಡಿಯೂರಪ್ಪ ಖರೀದಿಸಿದ ಮೊದಲ ಕಾರು : 2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಲ್ಲಿಸಿರುವ ಮಾಹಿತಿಯಲ್ಲಿ ಅವರು ಯಾವುದೇ ಕಾರನ್ನು ಹೊಂದಿಲ್ಲ. 1980 ರ ಸಂದರ್ಭದಲ್ಲಿ ರಾಜ್ಯಾದ್ಯಂತ ಸೈಕಲ್ ತುಳಿದು ಪ್ರವಾಸ ಮಾಡಿದ್ದ ಅವರು, ನಂತರದ ದಿನಗಳಲ್ಲಿ ಪಕ್ಷದ ಕಾರುಗಳಲ್ಲೇ ಸಂಚರಿಸುತ್ತಿದ್ದರು. ಇದೇ ಮೊದಲಬಾರಿಗೆ ರಾಜಾಹುಲಿ ಐಶಾರಾಮಿ ಕಾರು ಖರೀದಿ ಮಾಡಿದ್ದು ವಿಶೇಷ.
ಕರ್ನಾಟಕದಲ್ಲಿ ಅತ್ಯಂತ ದುಬಾರಿ ಕಾರು ಹೊಂದಿರುವ ರಾಜಕಾರಣಿ : ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವ ಎಂಟಿಬಿ ನಾಗರಾಜ ದುಬಾರಿ ಕಾರು ಹೊಂದಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಕಾರು ಎನಿಸಿಕೊಂಡಿರುವ ರೂಲ್ಸ್ – ರಾಯ್ಸ್ ಬೆಲೆ ಸುಮಾರು 12.75 ಕೋಟಿ ರೂ. KA-59 N-888 ನಂಬರ್ ಇರುವ ಈ ಕಾರನ್ನು ಎಂಟಿಬಿ ಬಳಸುತ್ತಿದ್ದಾರೆ. ಒಟ್ಟಿನಲ್ಲಿ ವಿಶ್ವದ ಅತ್ಯಂತ ದುಬಾರಿ ಕಾರನ್ನು ನಮ್ಮವರೇ ಆದ ಕರ್ನಾಟಕ ರಾಜಕಾರಣಿ ಹೊಂದಿದ್ದಾರೆ ಎಂಬುದೇ ವಿಶೇಷ.
ನಿಮ್ಮ ಅಭಿಪ್ರಾಯಗಳನ್ನು ಕಳಗೆ ನೀಡಿರುವ ಕಾಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ