Select Page

Advertisement

ಶತಮಾನಗಳ‌ ನಂತರ ಎಳೆದ ಆಂಜನೇಯನ ರಥ ; ಇತಿಹಾಸ ಸೃಷ್ಟಿಸಿದ ನಂದಿಹಾಳ ಜಾತ್ರೆ

ಶತಮಾನಗಳ‌ ನಂತರ ಎಳೆದ ಆಂಜನೇಯನ ರಥ ; ಇತಿಹಾಸ ಸೃಷ್ಟಿಸಿದ ನಂದಿಹಾಳ ಜಾತ್ರೆ

ರಾಮದುರ್ಗ : ಐತಿಹಾಸಿಕ ಉಲ್ಲೇಖ ಹೊಂದಿರುವ ತಾಲೂಕಿನ ನಂದಿಹಾಳ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಶತಮಾನಗಳ ಹಿಂದೆ ನಾನಾ ಕಾರಣಕ್ಕೆ ಆಂಜನೇಯಸ್ವಾಮಿ‌ ರಥೋತ್ಸವ ನಿಂತುಹೋಗಿದೆ ಎಂಬ ನಂಬಿಕೆ ಮಧ್ಯೆ ಏಪ್ರಿಲ್‌ 14 ರಂದು ಶ್ರೀ ಆಂಜನೇಯಸ್ವಾಮಿ ದೇವರ ರಥೋತ್ಸವ ಹಲವು ಶತಮಾನಗಳ ನಂತರ ಸಾವಿರಾರು ಭಕ್ತರು ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ರಥೋತ್ಸವದ ಪ್ರಯುಕ್ತ ನಿತ್ಯ ಅನ್ನ ಸಂತರ್ಪಣೆ ಹಾಗೂ ಪೂಜ್ಯ ಶ್ರೀಗಳಿಂದ ಆಶೀರ್ವಚನ ಹಾಗೂ ರಣರಂಗದಲ್ಲಿ ರುದ್ರ ತಾಂಡವ ಎಂಬ ನಾಟಕ ಪ್ರದರ್ಶನವಾಯಿತು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ನಂದಿಹಾಳ ಗ್ರಾಮ ತನ್ನದೆ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಇದು ಈ ಹಿಂದೆ ವಿಜಯಪುರ ಜಿಲ್ಲೆಯ ಬಾದಾಮಿ ತಾಲೂಕಿನ ಗ್ರಾಮವಾಗಿತ್ತು.

ಇದು ಬಾದಾಮಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟ ಗ್ರಾಮವಾಗಿತ್ತು. ಚಾಲುಕ್ಯರ ರಾಜ ನಾಲ್ಕನೆ ವಿಕ್ರಮಾದಿತ್ಯ ಬರೆಸಿದ ಶಿಲಾ ಶಾಸನಗಳಲ್ಲಿ ಹೇಳಿರುವಂತೆ ಈ ಗ್ರಾಮದಲ್ಲಿರುವ ಹನುಮಾನ್ ದೇವಾಲಯ ಅತಿ ಪುರಾತನವಾದದ್ದು ಇದರ ನಿರ್ವಹಣೆಗೆ ಭೂಮಿಯನ್ನು ದಾನವಾಗಿ ನೀಡಿದನು ಎಂಬ ಮಾಹಿತಿ ಕಂಡುಬರುತ್ತದೆ.

ಈ ಗ್ರಾಮದ ಹನುಮಾನ್ ದೇವಾಲಯದ ರಥೋತ್ಸವವು ಶತಮಾನಗಳ ಹಿಂದೆ ಅತ್ಯಂತ ವೈಭವದಿಂದ ನಡೆಯುತ್ತಿತ್ತು ಹಾಗೂ ರಥವನ್ನು ಆನೆಗಳ ಸಹಾಯದಿಂದ ಎಳೆಯಲಾಗುತ್ತಿತ್ತು. ಅದೆಂತಾ ಅಚಾತುರ್ಯ ನಡೆಯಿತೋ ಗೊತ್ತಿಲ್ಲ, ಇಲ್ಲಿನ ಜನರು ಹೇಳುವ ಕಥೆಯೆಂದರೆ ರಥವು ಇದ್ದಕ್ಕಿದ್ದಂತೆ ಭೂಮಿಯ ಒಳಗೆ ಮುಳುಗಿ ಹೋಯಿತೆಂಬ ಪ್ರತೀತಿ ಇದೆ. ಇದು ಇಂದಿಗೂ ಬಹಳ ನಿಗೂಢ ಮತ್ತು ಆಶ್ಚರ್ಯಕರ ವಿಷಯವಾಗಿದೆ.

2024 ರಲ್ಲಿ ಗ್ರಾಮದ ಸದಸ್ಯರು ಮತ್ತೊಂದು ಹನುಮಾನ್ ರಥವನ್ನು ಸಿದ್ಧಪಡಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡರು. ಆ ರಥೋತ್ಸವವನ್ನು ನಿರ್ಮಿಸಲಾಗಿದೆ ಎಪ್ರಿಲ್ 14 ರಂದು ಈ ಶ್ರೀ ಆಂಜನೇಯಸ್ವಾಮಿ ದೇವರ ರಥೋತ್ಸವ ಹಲವು ಶತಮಾನಗಳ ನಂತರ ಸಾವಿರಾರು ಭಕ್ತರು ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ರಥೋತ್ಸವದ ಪ್ರಯುಕ್ತ ನಿತ್ಯ ಅನ್ನ ಸಂತರ್ಪಣೆ ಹಾಗೂ ಪೂಜ್ಯ ಶ್ರೀಗಳಿಂದ ಆಶೀರ್ವಚನ ಹಾಗೂ ರಣರಂಗದಲ್ಲಿ ರುದ್ರ ತಾಂಡವ ಎಂಬ ನಾಟಕ ಪ್ರದರ್ಶನವಾಯಿತು.

Advertisement

Leave a reply

Your email address will not be published. Required fields are marked *

error: Content is protected !!