ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ 100 ಬಗೆಯ ಅಡುಗೆ ಮಾಡಿದ ಅತ್ತೆ
ಮಗಳನ್ನು ಮದುವೆಯಾದ ಅಳಿಯನಿಗೆ ಕೊಡುವ ಗೌರವ ಅಷಚಟಿಷ್ಟಲ್ಲ. ಅದರಲ್ಲೂ ಮೊದಲಬಾರಿಗೆ ಅಳಿಯ ಮನೆಗೆ ಬರುತ್ತಾನೆ ಎಂದರೆ ಸಡಗರ, ಸಂಭ್ರಮ ಕೇಳಬೇಕಾ…? ಹಾಗೆಯೇ ಇಲ್ಲೊಬ್ಬ ಅಳಿಮಯ ಅತ್ತೆ ಮನೆಗೆ ಮೊದಲ ಭೇಟಿ ನೀಡಿದ್ದು ಆತನಿಗೆ ಬರೋಬ್ಬರಿ 100 ಬಗೆಯ ಅಡುಗೆ ಮಾಡಿ ಉಣಬಡಿಸುವ ಮೂಲಕ ಖುಷಿ ಪಟ್ಟಿದ್ದಾರೆ.
ಹೌದು ಆಂದ್ರಪ್ರದೇಶದ ಗೋದಾವರಿ ಜಿಲ್ಲೆಯ ಕಾಕಿನಾಡಿನಲ್ಲಿ ಅತ್ತೆಯೊಬ್ಬರು ಮೊದಲಬಾರಿಗೆ ಮನೆಗೆ ಬಂದ ಅಳಿಯನಿಗೆ 100 ಬಗೆಯ ಭಕ್ಷ್ಯಗಳನ್ನು ಸಿದ್ದಪಡಿಸಿ ಅಳಿಯನಿಗೆ ಉಣಬಡಿಸಿದ್ದಾರೆ. ಸಧ್ಯ ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಕಾಕಿನಾಡ ಪಟ್ಟಣದ ಕಿರ್ಲಪುಂಡಿಯ ತಾಮರದ ಗ್ರಾಮದ ರತ್ನಕುಮಾರಿ ಎಂಬುವವರು ಕಳೆದ ವರ್ಷ ಕಾಕಿನಾಡ ಪಟ್ಟಣದ ವಿರತೇಜ ಎಂಬುವವರನ್ನು ಮದುವೆಯಾಗಿದ್ದರು. ಆಷಾಡ ಮಾಸ ಮುಗಿದ ನಂತರ ಅಳಿಯ ಅತ್ತೆ ಮನೆಗೆ ಬಂದಾಗ ಆತನಿಗೆ ಭರ್ಜರಿ ಸ್ವಾಗತ ನೀಡಲಾಗಿದೆ.
ಅತ್ತೆ ಮಾಡಿದ್ದ ನೂರು ಬಗೆಯ ತಿಂಡಿಗಳನ್ನು ನೋಡಿದ ಅಳಿಮಯ ಕ್ಷಣ ಹೊತ್ತು ಏನು ತಿನ್ನಬೇಕು ಎಂದು ತಿಳಿಯದೆ ಗೊಂದಲಕ್ಕೆ ಸಿಲುಕಿದ್ದಾನ. ಇನ್ನೂ ಅತ್ತೆಯ ಪ್ರೀತಿಗೆ ಸೋಶಿಯಲ್ ಮೀಡಿಯಾದಲದಲಿ ಮೆಚ್ಚುಗೆ ವ್ಯಕ್ತವಾಗಿದೆ.