ಅಬ್ಬಾ ಎರಡುವರೆ ವರ್ಷದ ಪುಟಾಣಿಯ ಸಾಧನೆ ನೋಡ್ರಿ…!
ಬೆಳಗಾವಿ : ಉನ್ನತ ಶಿಕ್ಷಣ ಪಡೆದರು ಕನ್ನಡ ಮಾತನಾಡಲು ಕಷ್ಟಪಡುವ ಉದಾಹರಣೆಗಳ ಮಧ್ಯೆ ಕೇವಲ ಎರಡುವರೆ ವರ್ಷದ ಪುಟ್ಟ ಬಾಲಕಿ ಸಧ್ಯ ಎಲ್ಲರೂ ಮುಚ್ಚುವಂತ ಸಾಧನೆ ಮಾಡಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ತನ್ನದಾಗಿಸಿಕೊಂಡಿದ್ದಾಳೆ.
ಎರಡುವರೆ ವರ್ಷದ ಈ ಪುಟ್ಟ ಮಗುವಿನ ಹೆಸರು ಪರಿಣಿಕಾ ಎಂದು. ಬೆಳಗಾವಿ ಮೂಲದ ಈ ಬಾಲಕಿ ಪೋಷಕರು ಸಧ್ಯ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ನೆಲೆಸಿದ್ದಾರೆ. ಈ ಪೋರಿ ಮಾಡಿರುವ ಸಾಧನೆ ಏನೆಂದರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಂಕಿಗಳನ್ನು ಹೇಳುವ ಈ ಪೋರಿ ಸ್ತೋತ್ರಗಳನ್ನು ನಿರರ್ಗಳವಾಗಿ ಹೇಳುತ್ತಾಳೆ. ಅಷ್ಟೇ ಅಲ್ಲದೆ ತರಕಾರಿ, ಹಣ್ಣು ಹಂಪಲು, ತಿಂಡಿ ತಿನಿಸುಗಳ ಹೆಸರನ್ನು ಹೇಳುತ್ತಾಳೆ.
ಕೇವಲ ಎರಡುವರೆ ವರ್ಷದಲ್ಲಿ ಇಷ್ಟೊಂದು ಸಾಮಾನ್ಯ ಜ್ಞಾನ ಹೊಂದಿರುವ ಪರಿಣಿಕಾಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರನ್ನು ತನ್ನದಾಗಿಸಿಕೊಂಡಿದ್ದಾಳೆ. ಇನ್ನೂ ಈ ಬಾಲಕಿ ಸಾಧನೆ ಕುರಿತು ಮಾತನಾಡುವ ಪೋಷಕರು ಇಷ್ಟು ಸಣ್ಣ ವಯಸ್ಸಿನಲ್ಲಿ ನಮ್ಮ ಮಗಳ ಸಾಧನೆ ಕುರಿತು ಹೆಮ್ಮೆಯಾಗುತ್ತದೆ. ಅವಳ ನೆನಪಿನ ಶಕ್ತಿ ನಮಗೂ ಆಶ್ಚರ್ಯತರಿಸಿದೆ ಎಂದು ಮಾತನಾಡುತ್ತಾರೆ. ಒಟ್ಟಿನಲ್ಲಿ ನಮ್ಮ ಕನ್ನಡದ ಪುಟಾಣಿ ಸಾಧನೆಗೆ ಒಂದು ಸಲಾಂ.