BIG BREAKING : ಅಥಣಿ: ಹತ್ತನೇ ತರಗತಿ ವಿದ್ಯಾರ್ಥಿಗಳಿಗೂ ಅಂಟಿದ ಕೊರೊನಾ ಸೋಂಕು
ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಂಕಂಚಿ ಗ್ರಾಮದ ಪ್ರೌಢಶಾಲೆಯ ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು ಶಾಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತ ಮಾಹಿತಿ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾದ್ಯಮಗಳ ಜೊತೆ ಮಾತನಾಡುತ್ತಾ, ತಾಲೂಕಿನಲ್ಲಿ ಸದ್ಯ ಹತ್ತನೇ ತರಗತಿ ವಿದ್ಯಾರ್ಥಿಗಳ ಶಾಲೆ ಪ್ರಾರಂಭವಾಗಿದೆ. ಇದರಲ್ಲಿ ಕಳೆದ 12 ತಾರೀಖಿನೆಂದು ತಾಲೂಕಿನ ಯಂಕಂಚಿ ಗ್ರಾಮದ ಪ್ರೌಢಶಾಲೆಯ 95 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗ ಸ್ವಾಬ್ ಟೆಸ್ಟ್ ಮಾಡಲಾಗಿತ್ತು, ಇದರಲ್ಲಿ 10 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನು 35 ವಿದ್ಯಾರ್ಥಿಗಳ ಕೊರೋನಾ ವರದಿ ಬಾಕಿ ಉಳಿದಿದೆ. ಸೋಂಕು ಪತ್ತೆಯಾದ ವಿದ್ಯಾರ್ಥಿಗಳ್ಳಿ ಅಷ್ಟೋಂದು ರೋಗ ಲಕ್ಷಣಗಳು ಹೆಚ್ಚಾಗಿಲ್ಲ, ಅವರೆಲ್ಲರೂ ಹೋಂ ಐಸೋಲೇಷನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಹಾಗೂ ತಾಲೂಕಿನ ಹಲಿಹಡಲಗಿ ಗ್ರಾಮದ ಒರ್ವ ಶಿಕ್ಷಕರಿಗೆ ಸೋಂಕು ಪತ್ತೆಯಾಗಿದ್ದು ಅವರು ಕೂಡ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಕೊರೋನಾ ವ್ಯಾಕ್ಸೀನ್ ಅಭಿಯಾನ ತಾಲೂಕಿನಲ್ಲಿ ಪ್ರಾರಂಭ ಆಗಿದೆ ಮೊದಲೇ ಡೋಸ್ ಎಲ್ಲರಿಗೂ ಮುಗಿದಿದೆ ಎಂದು ಹೇಳಿದರು.