
ಕಚೇರಿ ಸ್ಥಳಾಂತರ ಹೇಳಿಕೆ : ಉಲ್ಟಾ ಹೊಡೆದ ಬಿಜೆಪಿ ಮುಖ್ಯ ವಕ್ತಾರ

ಬೆಳಗಾವಿ : ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ ಮಾಡಿದರು ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಬಿಜೆಪಿ ಮುಖ್ಯ ವಕ್ತಾರ ಎಮ್.ಜಿ. ಮಹೇಶ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದು, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವದು ಈ ಬಗ್ಗೆ ಯಾವುದೆ ಗೊಂದಲಗಳಿಗೆ ಅವಕಾಶ ಯಾರು ನೀಡಬಾರದೆಂದು ಹೇಳಿದ್ದಾರೆ.
ನಗರದ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿ ಮಾಧ್ಯಮ ಸದಸ್ಯರ ಸಂಘಟನಾ ಸಭೆಯಲ್ಲಿ ಮಾತನಾಡಿದ ಇವರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ದವಾಗಿದ್ದು ಯಾವುದೆ ಅಹಿತಕರ ಘಟನೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಬರುವ ದಿನಗಳಲ್ಲಿ ರಾಜ್ಯದ ಅನೇಕ ಮುಖ್ಯ ಕಛೇರಿಗಳು ಸುವರ್ಣವಿಧಾನಸೌಧಕ್ಕೆ ಬರಲಿದ್ದು,
ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವದು ಈ ಬಗ್ಗೆ ಯಾವುದೆ ಗೊಂದಲಗಳಿಗೆ ಅವಕಾಶ ಯಾರು ನೀಡಬಾರದೆಂದರು.

ಪ್ರಪಂಚದಲ್ಲಿ ಬಿಜೆಪಿ ಅತ್ಯಂತ ದೊಡ್ಡದಾದ ಬಲಿಷ್ಠ ರಾಜಕೀಯ ಪಕ್ಷವಾಗಿದ್ದು ಇಂದು 19 ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಸುಸ್ಥಿರ ಸರ್ಕಾರ ನೀಡಿದ ಹೆಗ್ಗಳಿಕೆ ಬಿಜೆಪಿಯದ್ದಾಗಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನ ಯೋಜನೆಯ ಹಾಗೂ ಬಿಜೆಪಿಯ ಸದ್ವಿಚಾರಗಳನ್ನು ಬಿತ್ತರಿಸುವ ಕಾರ್ಯ ಎಲ್ಲ ಮಾಧ್ಯಮಗಳ ಸಹಕಾರದಿಂದ ಅವ್ಯಾಹತವಾಗಿ ನಡೆಯುತ್ತಿರುವದು ಸಂತಸದ ವಿಷಯವಾಗಿದೆ ಎಂದರು.
ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುನಾಕರ ಖಾಸಲೆ, ಎಫ್.ಎಸ್.ಸಿದ್ದನಗೌಡರ, ಶರದ್ ಪಾಟೀಲ, ಸಂಜಯ ಕಂಚಿ, ಪ್ರಭು ಹೂಗಾರ, ಸುಭಾಷ ಪಾಟೀಲ, ಸಂದೀಪ್ ದೇಶಪಾಂಡೆ, ಜಿಲ್ಲಾ ಮಾಧ್ಯಮ ಪ್ರಭಾರಿ ಮಲ್ಲಿಕಾರ್ಜುನ ಮಾದಮ್ಮನವರ ಇದ್ದರು.