Select Page

Advertisement

ಕುಡಿದ ಅಮಲಿನಲ್ಲಿ ಸ್ವಂತ ಮಗಳ ಮೇಲೆ ವಿಕೃತಿ ಮೆರೆದ ಪಾಪಿ ತಂದೆ

ಕುಡಿದ ಅಮಲಿನಲ್ಲಿ ಸ್ವಂತ ಮಗಳ ಮೇಲೆ ವಿಕೃತಿ ಮೆರೆದ ಪಾಪಿ ತಂದೆ

ಬೆಳಗಾವಿ: ಕುಡಿದ ಮತ್ತಿನಲ್ಲಿ ತಂದೆಯೊಬ್ಬರು ಐದು ವರ್ಷದ ಮಗಳ ಕೆನ್ನೆ ಮತ್ತು ಎದೆಯ ಭಾಗಕ್ಕೆ ಕಚ್ಚಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಗಳ ಮೇಲೆ ವಿಕೃತಿ ಮೆರೆದ ತಂದೆ ಕಾಕತಿ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಆರ್ ಎಂಪಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ.

ಇತ್ತ ಖಾಸಗಿ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಮಗುವಿನ ತಾಯಿ ಸೇವೆ ಸಲ್ಲಿಸುತ್ತಿದ್ದು ತಾಯಿ ಕೆಲಸಕ್ಕೆ ತೆರಳಿದ ವೇಳೆ ಕುಡಿದ ನಶೆಯಲ್ಲಿ ತಂದೆ ವಿಕೃತಿ ಮೆರೆದಿದ್ದಾನೆ. ಸದ್ಯ ಆರೋಪಿ ತಂದೆಯನ್ನು ಕಾಕತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.

ಘಟನೆ ಕುರಿತಂತೆ ಈವರೆಗೂ ಪಾಪಿ ತಂದೆಯ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಹೆತ್ತ ಮಗಳ ಮೇಲೆ ವಿಕೃತಿ ಮೆರೆದಿರುವ ತಂದೆ ಮಗಳ ಕೆನ್ನೆ ಹಾಗೂ ಎದೆ ಭಾಗಕ್ಕೆ ಕಚ್ಚಿ ವಿಕೃತಿ ಮೆರೆದಿದ್ದಾನೆ.‌

ಬೆಳಗಾವಿ ಉದ್ಯಮಬಾಗದಲ್ಲಿ ಯುವಕನ ಕೊಲೆ ಪ್ರಕರಣ; ಐವರ ಬಂಧನ

ಬೆಳಗಾವಿ: ನಗರದ ಮಜಗಾವಿ ಪ್ರದೇಶದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಬಾಗ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಮಜಗಾವಿಯ ಅಂಬೇಡ್ಕರ್ ಗಲ್ಲಿಯ ಸಂದೀಪ ಕೋಲಕಾರ್ ( 32 ), ಕುಮಾರ, ಸಂತೋಷ ರಾಜಂಗಳಿ ( 19 ), ಪ್ರದೀಪ ಕೋಲಕಾರ್ ( 24 ), ಕಲ್ಲೇಶ್ವರ ನಗರದ ರವಿ ಗಂಗಪ್ಪಾ ಗುಳ್ಳೆದಕೊಪ್ಪ ( 25 ), ಶಿವಕುಮಾರ ಮಾನೆ ( 22 ) ಬಂಧಿತರು.

ಘಟನೆ ಹಿನ್ನೆಲೆ: ಮಹಿಳೆಯನ್ನು ಚುಡಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಬೆಳಗಾವಿ ಮಜಗಾವಿ ಪ್ರದೇಶದಲ್ಲಿ ಜೂ.30ರಂದು ಅಂಬೇಡ್ಕರ್ ಗಲ್ಲಿಯ ಯಲ್ಲೇಶಪ್ಪ ಶಿವಾಜಿ ಕೋಲಕಾರ್ ( 37 ) ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಯಲ್ಲೇಶ್ ಕೋಲಕಾರ್ ಅವರ ಸಹೋದರಿ ಸವಿತಾ ಮೇತ್ರಿ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಎರಡು ದಿನಗಳಲ್ಲಿ ಕೊಲೆ ಮಾಡಿದ ಆರೋಪದಡಿ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಕೊಲೆ ಮಾಡಲು ಬಳಸಿದ ಹರಿತವಾದ ಕೊಡ್ಲಿ, ತಲ್ವಾರ್, ಚಾಕು, ಕೊಯ್ತಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡು ಕಾನೂನು ಕ್ರಮಜರುಗಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಪತ್ತೆ ಮಾಡಿದ ತಂಡವನ್ನು ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಶ್ಲಾಘಿಸಿದ್ದಾರೆ.ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ‌ ತನಿಖೆ ಮುಂದುವರಿದಿದೆ.

Advertisement

Leave a reply

Your email address will not be published. Required fields are marked *