ಇಂಚಗೇರಿ ಮಠಕ್ಕೆ ಚಿತ್ರನಟ ದೊಡ್ಡಣ್ಣ ಭೇಟಿ
ವಿಜಯಪುರ : ಜಿಲ್ಕೆಯ ಇಂಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರ ಇಂಚಗೇರಿ ಮಠಕ್ಕೆ ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣ ಭೇಟಿ ನೀಡಿ ಆಶಿರ್ವಾದ ಪಡೆದುಕೊಂಡರು.
ಶುಕ್ರವಾರ ಶ್ರೀಮಠಕ್ಕೆ ಆಗಮಿಸಿದ ದೊಡ್ಡಣ್ಣ ಮಠದ ಪೀಠಾಧಿಪತಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ಧೇಶ್ವರ ಮಹಾರಾಜರಿಂದ ಆಶಿರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಮಾಧವಾನಂದ ಶೇಗುಣಸಿ, ಚಲನಚಿತ್ರ ನಟ ನಿರ್ದೇಶಕ ನಿರ್ಮಾಪಕ ಪತ್ರಕರ್ತ ವಿಶ್ವಪ್ರಕಾಶ ಟಿ ಮಲಗೊಂಡ, ಪ್ರಕಾಶ ಕಾಲತಿಪ್ಪಿ, ಮಲ್ಲಿಕಾರ್ಜುನ ಕಾಲತಿಪ್ಪಿ, ಮಠದ ವಿವೇಕಾನಂದ ಅರಳಿ, ಶಂಕ್ರೆಪ್ಪ ಮಹಾರಾಜರು, ಮುಕುಂದ ಆರ್ ಮುರಗೋಡ, ರಮೇಶ ಪೂಜಾರಿ, ಕೆ.ಎಸ್.ಈಸರಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.