
ಅತ್ಯಾಚಾರಿ ಎನ್ಕೌಂಟರ್ ಪ್ರಕರಣ ಸಿಐಡಿ ತನಿಖೆ ಪ್ರಾರಂಭ

ಹುಬ್ಬಳ್ಳಿ : ಬಾಲಕಿ ಕೊಲೆ ಮಾಡಿದ ಅತ್ಯಾಚಾರಿಯ ಎನಕೌಂಟರ್ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳ ತಂಡದಿಂದ ತನಿಖೆ ಶುರುವಾಗಿದೆ.
ಐದು ವರ್ಷದ ಬಾಲಕಿ ಮರ್ಡರ್ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ ಗೊಂಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಗೆ ಸಿಐಡಿ ಅಧಿಕಾರಿಗಳು ಮಂಗಳವಾರ ಆಗಮಿಸಿದರು.
ಆರೋಪಿ ಪೈರಿಂಗ್ ನಲ್ಲಿ ಸಾವು ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದು, ಆರೋಪಿ ಸಾವು ಪ್ರಕರಣದಲ್ಲಿ ಸಿಐಡಿ ತನಿಖೆ ನಡೆಯಲಿದೆ.
ಸಿಐಡಿ ಎಸ್.ಪಿ ವೆಂಕಟೇಶ್,ಡಿವೈಎಸ್‌ಪಿ ಪುನೀತ್‌ಕುಮಾರ, ಇನ್ಸ್ಪೆಕ್ಟರ್ ಮಂಜುನಾಥ ಅಧಿಕಾರಿಗಳನ್ನ ಒಳಗೊಂಡ ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿ, ಪ್ರಕರಣದ ಸಂಪೂರ್ಣತೆ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.