MAMATA BANERJEE : ಭವಾನಿಪುರದಲ್ಲಿ ಮಮತಾ ಜಯಭೇರಿ
ಪಶ್ಚಿಮ ಬಂಗಾಳದ ಭವಾನಿಪುರ ಉಪ ಚುನಾವಣೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ 58 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ್ದು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ.
ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದರು. ಈ ಸಂದರ್ಭದಲ್ಲಿ ಟಿಎಂಸಿ ಪಕ್ಷ ಬಹುಮತ ಪಡೆದು ಮಮತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಂಪುಟ ಸೇರ್ಪಡೆಯಾದ ಆರು ತಿಂಗಳೊಳಗೆ ಚುನಾವಣೆಯಲ್ಲಿ ಗೆದ್ದ ನಂತರ ಅಧಿಕಾರದಲ್ಲಿ ಮುಂದುವರೆಯಬೇಕಾದ ಅನಿವಾರ್ಯತೆ ಇಂದ ಉಪ ಚುನಾವಣೆ ನಡೆದಿತ್ತು.
ಟಿಎಂಸಿ ಕಾರ್ಯಕರ್ತರ ಸಂಭ್ರಮಾಚರಣೆ : ಈ ಹಿಂದೆ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ರಾಜಕೀಯ ಎದುರಾಳಿ ಸುವೇಂದು ಅಧಿಕಾರಿ ವಿರುದ್ಧ ತೊಡೆತಟ್ಟಿ ನಂದಿಗ್ರಾಮ ಆಯ್ಕೆಮಾಡಿಕೊಂಡು ಸೋತಿದ್ದರು. ಸಧ್ಯ ಗೆದ್ದಿರುವ ಭವಾನಿಪುರ ವಿಧಾನಸಭಾ ಕ್ಷೇತ್ರ ಟಿಎಂಸಿ ಭದ್ರಕೋಟೆ ಯಾಗಿದ್ದು ಶೆ. 20 ರಷ್ಟು ಮುಸ್ಲಿಂ ಮತಗಳು ಹಾಗೂ ಬಾರಿ ಪ್ರಮಾಣದಲ್ಲಿ ಬಾಂಗ್ಲಾ ನಿರಾಶ್ರಿತರ ಹಾಗೂ ಹಿಂದುಳಿದ ವರ್ಗದ ಮತಗಳು ಇಲ್ಲಿವೆ.