VIDEO : ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಶಾರುಖ್ ಖಾನ್ ಮಗ (ಎನ್ ಸಿ ಬಿ) ಬಲೆಗೆ
ಮುಂಬೈ : ಸಮುದ್ರದ ಮಧ್ಯೆ ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹತ್ತು ಜನರನ್ನು ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ (ಎನ್ ಸಿ ಬಿ) ಅಧಿಕಾರಿಗಳು ಶನಿವಾರ ರಾತ್ರಿ ಬಂಧಿಸಿದ್ದಾರೆ.
ವೀಡಿಯೋ ನೋಡಲು ಕೆಳಗಿನ ಲಿಂಕ್ ಒತ್ತಿ https://twitter.com/rose_k01/status/1444497872746020868?s=19
ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಕಾರ್ಡೆಲಿಯಾ ಕ್ರೂಸ್ ಲೈನರ್‌ನ “ದಿ ಎಂಪ್ರಸ್’ ಹಡಗಿನೊಳಗೆ ಡ್ರಗ್ಸ್ ಪಾರ್ಟಿ ನಡೆಸಲಾಗುತ್ತಿತ್ತು. ನಿಖರ ಮಾಹಿತಿಯೊಂದಿಗೆ ದಾಳಿ ಮಾಡಿರುವ ಎನ್ ಸಿ ಬಿ ಅಧಿಕಾರಿಗಳು. ಈ ಪಾರ್ಟಿಯಲ್ಲಿದ್ದ ಖ್ಯಾತ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಸೇರಿದಂತೆ ಹತ್ತು ಜನರನ್ನು ಬಂಧಿಸಿದ್ದಾರೆ.
ಈ ಹಡಗು ಮುಂಬೈನಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಸಮುದ್ರ ತೀರ ಬಿಟ್ಟು ಸ್ವಲ್ಪ ಸಮಯದಲ್ಲೇ ಪಾರ್ಟಿ ಆರಂಭಿಸಲಾಗಿದೆ. ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತಿಡಗಿದ್ದ ಯುವಕರು ಡ್ರಗ್ಸ್ ತಗೆದುಕೊಳ್ಳುತ್ತಿದ್ದರು. ಬಂಧಿತರಾಗಿರುವರು ಎಲ್ಲರೂ ಹೈ ಪ್ರೋಫೈಲ್ ವ್ಯಕ್ತಿಗಳ ಮಕ್ಕಳಾಗಿದ್ದಾರೆ.