ಬಡ ಬಾಲಕಿ ಶಾಲಾ ಶುಲ್ಕ ಭರಿಸಿದ ಕ್ರಿಕೆಟಿಗ ಕೆ.ಎಲ್ ರಾಹುಲ್
ಹುಬ್ಬಳ್ಳಿ : ಭಾರತೀಯ ಕ್ರಿಕೆಟ್ ತಂಡದಲ್ಲಿ ಭರವಸೆ ಆಟಗಾರ ಆಗಿರುವ ಕೆ.ಎಲ್ ರಾಹುಲ್ ಸಧ್ಯ ಮಾನವೀಯ ನೆಲೆಗಟ್ಟಿನಲ್ಲಿ ಸುದ್ದಿಯಾಗಿದ್ದಾರೆ. ಬಡ ಕುಟುಂಬದ ಬಾಲಕಿಯ ತರಗತಿ ಶುಲ್ಕ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ತಾಲೂಕಿನ ತಡಸಿನಕೊಪ್ಪ ಗ್ರಾಮದ ಗ್ಲೋಬಲ್ ಎಕ್ಸಲೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರುತಿ ಕುಲಾವಿ ಅವರ ಶಾಲೆಯ 21 ಸಾವಿರ ರೂ ಶುಲ್ಕವನ್ನು ಕೆ.ಎಲ್ ರಾಹುಲ್ ( K L Rahul ) ಭರಿಸಿದ್ದಾರೆ.
ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ಈ ಹಿಂದೆ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ರಾಹುಲ್ ಅವರಿಂದಲೇ ಆರ್ಥಿಕ ನೆರವು ಕೊಡಸಿದ್ದರು. ಹಾಗೆಯೇ ಶ್ರುತಿ ಕುಟುಂಬದವರು ಮುಂಜುನಾಥ ಅವರ ಬಳಿ ಸಮಸ್ಯೆ ಹೇಳಿಕೊಂಡಿದ್ದರು.
ಈ ಕುರಿತು ಸ್ನೇಹಿತರ ಮೂಲಕ ಕೆ.ಎಲ್ ರಾಹುಲ್ ಅವರನ್ನು ಸಂಪರ್ಕಿಸಿದ್ದ ಮಂಜುನಾಥ ಬಡ ಮಗುವಿಗೆ ಸಹಾಯ ದೊರಕಿಸಿಕೊಟ್ಟಿದ್ದಾರೆ.