ಸೋತ ಪಾಕಿಸ್ತಾನಿ ಆಟಗಾರರನ್ನು ನೋಡಿ “ ಜೈ ಶ್ರೀ ರಾಮ್ ” ಎಂದು ಕೂಗಿದ ಭಾರತೀಯ ಕ್ರಿಕೆಟ್ ಪ್ರೇಮಿಗಳು
ಅಹಮದಾಬಾದ್ : ಭಾರತೀಯ ಕ್ರಿಕೆಟ್ ತಂಡದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಮತ್ತೊಮ್ಮೆ ವಿಶ್ವಕಪ್ ಕ್ರೀಡಾಕೂಟದಲ್ಲಿ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಈ ಸಂದರ್ಭದಲ್ಲಿ ಭಾರತೀಯ ಅಭಿಮಾನಿಗಳು ಕೊಟ್ಟ ಪ್ರತ್ಯುತ್ತರ ವಿಭಿನ್ನವಾಗಿತ್ತು.
ಭಾರತ ಹಾಗೂ ಪಾಕಿಸ್ತಾನ ನಡುವೆ ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿದೆ. ಇದರಿಂದ ಈವರೆಗೆ ಭಾರತ ಪಾಕಿಸ್ತಾನ ವಿರುದ್ಧ ಆಡಿರುವ ಎಂಟು ವಿಶ್ವಕಪ್ ಪಂದ್ಯದಲ್ಲಿ ಎಲ್ಲವನ್ನೂ ಭಾರತ ಗೆದ್ದಿದೆ.
ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಪಂದ್ಯ ಸೋತ ನಂತರ ಕ್ರೀಡಾಂಗಣದಿಂದ ಡ್ರೆಸ್ಸಿಂಗ್ ರೂಂ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಜೈ ಶ್ರೀ ರಾಮ್ ಎಂದು ಹೇಳುವ ಮೂಲಕ ಘೋಷಣೆ ಮೊಳಗಿಸಿದರು.
ಒಟ್ಟಿನಲ್ಲಿ ಅಹಮದಾಬಾದ್ ನ ಕ್ರೀಡಾಂಗಣ ಶನಿವಾರ ಜನರಿಂದ ತುಂಬಿ ತುಳುಕಿತ್ತು. ಇಂತಹ ರೋಚಕ ಪಂದ್ಯದಲ್ಲಿ ಭಾರತ ಗೆದ್ದು ಇತಿಹಾಸ ಸೃಷ್ಟಿಸಿದ್ದು ಮಾತ್ರವಲ್ಲದೆ ವಿಶ್ವಕಪ್ ನ ಐತಿಹಾಸಿಕ ವಿಜಯದ ಓಟವೂ ಮುಂದುವರಿದಿದೆ.