
ಸಂಭ್ರಮಾಚರಣೆ ನಡೆಯಬೇಕಿದ್ದ ಮನೆಯಲ್ಲಿ ಸೂತಕ ; ಹನುಮಂತನ ಮನೆಯಲ್ಲಿ ನೀರವ ಮೌನ

ಬೆಂಗಳೂರು : ಕನ್ನಡ ಬಿಗ್ ಬಾಸ್ 11 ಗೆಲ್ಲುವ ಮೂಲಕ ಹಳ್ಳಿ ಹೈದ ಹನುಮಂತ ಸಂಭ್ರಮಾಚರಣೆ ಆಚರಿಸಬೇಕಿದ್ದ ಜಾಗದಲ್ಲಿ ಸಧ್ಯ ನೀರವ ಮೌನ ಆವರಿಸಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಹನುಮಂತು ಅವರ ಚಿಕ್ಕಪ್ಪ ದೇವಪ್ಪ ಎನ್ನುವವರು ನಿಧನ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.
ಇತ್ತ ಹನುಮಂತ ಬಿಬ್ ಬಾಸ್ ಗೆಲ್ಲುತ್ತಿದ್ದಂತೆ ಆತನನ್ನು ನೋಡಲು ಅವರ ಹಳ್ಳಿಗೆ ಸಾಕಷ್ಟು ಅಭಿಮಾನಿಗಳು ಆಗಮಿಸಿದ್ದರು. ಆದರೆ ಮನೆಯಲ್ಲಿ ಈ ಘಟನೆ ಸಂಭವಿಸಿದ ಹಿನ್ನಲೆಯಲ್ಲಿ ಎಲ್ಲರಿಗೂ ನಿರಾಸೆ ಉಂಟಾಗಿದೆ.
ಹನುಮಂತ ಸೇರಿ ಅವರ ತಂದೆ, ತಾಯಿ ಬೆಂಗಳೂರಿನಲ್ಲಿ ಇದ್ದಾರೆ. ನಿನ್ನೆ ರಾತ್ರಿ ನಡೆದ ಬುಗ್ ಬಾಸ್ ಫಿನಾಲೆಯಲ್ಲಿ ಹನುಮಂತ ಗೆಲುವು ಸಾಧಿಸಿದ್ದ.