Select Page

ಬಿಗ್ ಬಾಸ್ ಮನೆಗೆ ಎರಡು ಸಿಂಹಗಳು ; ಅಲ್ಲೋಲ ಕಲ್ಲೋಲ ಗ್ಯಾರಂಟಿ

ಬಿಗ್ ಬಾಸ್ ಮನೆಗೆ ಎರಡು ಸಿಂಹಗಳು ; ಅಲ್ಲೋಲ ಕಲ್ಲೋಲ ಗ್ಯಾರಂಟಿ

ಬೆಂಗಳೂರು : ಬಿಗ್ ಬಾಸ್ ಕನ್ನಡ – 11 ತೀವ್ರ ಕುತೂಹಲ ಮೂಡಿಸಿದ್ದು ಇವತ್ತು ಭಾನುವಾರದಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಎರಡು ಮುತ್ತುಗಳು ಬಿಗ್ ಬಾಸ್ ಮನೆಗೆ ಹೋಗಿದ್ದು ಕನ್ಫರ್ಮ್ ಆಗಿದ್ದು ಅಲ್ಲೋಲ, ಕಲ್ಲೋಲ‌ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಶ್ರೀ ಚೈತ್ರಾ ಕುಂದಾಪುರ ಅವರು ರಾಜ್ಯಾದ್ಯಂತ ಹೆಸರು ಮಾಡಿದ್ದರು. ನಂತರದ ದಿನಗಳಲ್ಲಿ ಉದ್ಯಮಿ ಒಬ್ಬರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂ. ಹಣ ಹೊಡೆದ ಪ್ರಕರಣದಲ್ಲಿ ಜೈಲು ಸೇರಿದ್ದರು.‌

ಈ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್ ಸೇರಿಕೊಂಡು ಮಾಡಿರುವ ದೊಡ್ಡ ನಾಟಕಕ್ಕೆ ಉದ್ಯಮಿ ಕೋಟ್ಯಾಂತರ ರೂ. ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ.‌ ಆ ನಂತರದ ಜೈಲು‌ ಪಾಲಾಗಿದ್ದ ಮಹಾನ್ ನಟಿ ಚೈತ್ರ ಕುಂದಾಪುರ ಅವರು ದೊಡ್ಡ ನಾಟಕವನ್ನೇ ಆಡಿದ್ದರು‌. ಇಷ್ಟೇಲ್ಲ ಸಾಧನೆ ಮಾಡಿರುವ ಚೈತ್ರ ಈ ಬಾರಿ ಬಿಗ್ ಬಾಸ್ ಸ್ಪರ್ಧಿ.

ಇನ್ನೂ ವಕೀಲ ಜಗದೀಶ್ ಎಂದೇ ಖ್ಯಾತಿ ಪಡೆದಿರುವ ಕೆ.ಎನ್ ಜಗದೀಶ್ ಕುಮಾರ್ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ. ಸದಾಕಾಲವೂ ಒಂದಿಲ್ಲೊಂದು ಹೇಳಿಕೆಯಿಂದ ಜನರನ್ನು ಮಂಗ ಮಾಡುವ ಈತ, ಇತ್ತಿಚ್ಚಿಗೆ ರಾಜ್ಯದ ಮಾಜಿ ಸಿಎಂ ಒಬ್ಬರ ರಾಸಲೀಲೆ ಹೊರಬಿಡುವುದಾಗಿ ಹೇಳಿಕೆ‌ ನೀಡಿದ್ದರು‌.

ಒಟ್ಟಿನಲ್ಲಿ ಈ ಬಾರಿ Kannada Bigg Boss – 11 ರಲ್ಲಿ Chaitra Kundapura ಹಾಗೂ Advocate Jagadish ಇಬ್ಬರೂ ಹೋಗಿದ್ದು ಮಹಾ ಮನೆಯಲ್ಲಿ ಅಲ್ಲೋಲ ಕಲ್ಲೋಲ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!