ಜುಲೈ 16 ರಂದು ನಡೆಯಬೇಕಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರದ್ದು
ಬೆಳಗಾವಿ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಸರಕಾರ ವಿನಾಯಿತಿ ನೀಡಿರುವುದರಿಂದ ಪ್ರಸಕ್ತ ಮಾಹೆಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿರುತ್ತದೆ.
ಹೆಚ್ಚು ಮಳೆಯಾಗುತ್ತಿರುವ ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಪ್ರಸಕ್ತ ಜುಲೈ ಮಾಹೆಯ ಕಾರ್ಯಕ್ರಮಕ್ಕೆ ವಿನಾಯಿತಿ ನೀಡಲಾಗಿರುತ್ತದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶನಿವಾರ(ಜುಲೈ 16) ಖಾನಾಪುರ ತಾಲ್ಲೂಕಿನ ಪಾರವಾಡ ಗ್ರಾಮಕ್ಕೆ ಭೇಟಿ ನೀಡಲಿದ್ದರು. ಆದರೆ ಸದರಿ ವಿನಾಯಿತಿ ಪ್ರಕಾರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿರುತ್ತದೆ.