
ಅಥಣಿ : ಇಂದಿನಿಂದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸ ಆರಂಭ

ಅಥಣಿ : ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳ ಶ್ರೀಕ್ಷೇತ್ರ ನದಿ – ಇಂಗಳಗಾಂವ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ
ಇಂದಿನಿಂದ ಏಳು ದಿನಗಳ ವರೆಗೆ ನಂದಿ ಬಸವೇಶ್ವರ ಜಾತ್ರಾ ಮಹೋತ್ಸ ನೆರವೇರಲಿಗೆ ಎಂದು ಗುರುಲಿಂಗ ದೇವರ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಗಳು. ಶುಕ್ರವಾರ 3 ರಂದು ನಂದಿ ಧ್ವಜಾರೋಹಣ ನೆರವೇರಿಸಿ ಶಿವನಾಮ ಸ್ಮರಣೆ ಮೂಲಕ ಏಳು ದಿನಗಳ ವರೆಗೆ ಸಪ್ತಾಹ ಕಾರ್ಯಕ್ರಮ ದಿನದ 24 ಗಂಟೆ ನೆರವೇರಲಿದೆ.
ಗುರುವಾರ 9 ರಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶುಕ್ರವಾರ 10 ರಂದು ನಂದಿ ಬಸವೇಶ್ವರನಿಗೆ ರುದ್ರಾಭಿಷೇಕ, ತೊಟ್ಟಿಲು ಪೂಜೆ ನಂತರ ರತೋತ್ಸವ ಕಾರ್ಯಕ್ರಮ ಜರುಗಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ 65 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು ಭಕ್ತರು ಪಾಲ್ಗೊಂಡು ಬಸವೇಶ್ವರ ಆಶಿರ್ವಾದ ಪಡೆಯಬೇಕೆಂದು ಶ್ರೀಗಳು ಹೇಳಿದ್ದಾರೆ.