ಬೆಳಕು ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ
ಗ್ರಾಮೀಣ ಭಾಗದ ಮನೆಗಳಿಗೆ ಗುರುತಿನ ಚೀಟಿ ಮೂಲಕ ವಿದ್ಯುತ್ ಸೌಲಭ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ : ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ಬೆಳಕು ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಗುರುತಿನ ಚೀಟಿ ಹೊಂದಿದ ತೋಟ ಪಟ್ಟಿ ಮನೆಗಳು, ಹೊರವಲಯದ ಮನೆಗಳು, ಹಾಗೂ ವಿದ್ಯುತ್ ಸಂಪರ್ಕ ಇಲ್ಲದ ಪ್ರತಿ ಮನೆಗಳಿಗೆ ಬೆಳಕು ಯೋಜನೆ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಮಂಗಳವಾರ (ಡಿ.21) ಇಂಧನ ಇಲಾಖೆಯ ಬೆಳಕು ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಬೆಳಕು ಯೋಜನೆ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ರೈತರಿಗೆ ಟಿಸಿ ಒದಗಿಸಲು ರೈತರು ಯಾವುದೇ ವಾಹನ ಬಳಸುವ ಅವಶ್ಯಕತೆ ಇಲ್ಲ. ಇಂಧನ ಇಲಾಖೆಯ ವಾಹನಗಳ ಮೂಲಕ ರೈತರಿಗೆ ಟಿಸಿ ಒದಗಿಸಲಾಗುವುದು.
ಸರ್ಕಾರದಿಂದ ಅತಿ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರ ಪಂಪ್ ಸೆಟ್, ರೈತರ ಮನೆಗಳ ವಿದ್ಯುತ್, ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಶಕ್ತಿ, ಇತ್ತೀಚಿನ ದಿನಗಳಲ್ಲಿ ಬಹಳ ಪ್ರಮುಕತೆ ಪಡೆದಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ವಿದ್ಯುತ್ ಇಲಾಖೆ ನೆರವಾಗಿದೆ. ರೈತರಿಗೆ ದಿನ ಅಲೆದಾಡುವ ಪರಿಸ್ಥಿತಿ ಎದುರಾಗಿದ್ದು, ಈ ವ್ಯವಸ್ಥೆ ತೆಗೆದು ಹಾಕಲು ಈ ಯೋಜನೆ ಜಾರಿಗೆ ತರಲಾಗಿದೆ.
ಸಮಯಕ್ಕೆ ಸರಿಯಾಗಿ ರೈತರಿಗೆ ಸ್ಪಂದಿಸಲಾಗುವದು ಬೀದಿ ಕಂಬಗಳು, ವಿದ್ಯುತ್ ಪರಿವರ್ತಕ ದುರಸ್ತಿ ಹಾಗೂ ಯಾವುದೇ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂದು ಹೇಳಿದರು.
ಸಮರ್ಪಕವಾಗಿ ವಿದ್ಯುತ್ ಶಕ್ತಿ ಒದಗಿಸಲಾಗುವುದು ದಿನದ 24 ಗಂಟೆಗಳ ಕಾಲ ವಿದ್ಯುತ್ ಶಕ್ತಿ ಒದಗಿಸಲಾಗುವುದು. ಕೇಂದ್ರ ಸರ್ಕಾರದ ಆರ್. ಡಿ.ಎಸ್.ಎಸ್ ಅನುದಾನ ಬಳಸಿಕೊಂಡು ಹೆಚ್ಚಿನ ಯೋಜನೆಗಳ ಮೂಲಕ ರೈತರಿಗೆ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಂತ್ರಿಗಳು ತಿಳಿಸಿದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲಕುಮಾರ ಅವರು ಮಾತನಾಡಿ ರಾಜ್ಯದಲ್ಲಿ ವಿಧ್ಯುತ ರಹಿತ ಮನೆಗಳಿಗೆ ವಿಧ್ಯುತ ಸಂಪರ್ಕ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಬೆಳಕು ಯೋಜನೆ ಇದಾಗಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಿಸುವವರು ಗ್ರಾ.ಪಂ ಗಳಲ್ಲಿ ಎನ.ಓ.ಸಿ ಪಡೆಯದೇ ವಿಧ್ಯುತ ಸಂಪರ್ಕ ಒದಗಿಸುವಂತಹ ಮಹತ್ತರ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ರೈತರ ಹೊಲಗಳಲ್ಲಿರುವ ಟಿ.ಸಿ.ಸುಟ್ಟು ಹೋದರೆ ಕೇವಲ ಇಪ್ಪತ್ತನಾಲ್ಕು ಗಂಟೆಯಲ್ಲಿ ಬದಲಾಯಿಸುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದ್ದು ಅದರಂತೆ ವಿಧ್ಯುತ ಪರಿವರ್ತಕ ಬದಲಾವಣೆಗಾಗಿ 198 ಪರಿವರ್ತಕ ಬ್ಯಾಂಕುಗಳ ಮೂಲಕ ಈವರೆಗೆ 19830 ವಿಧ್ಯುತ ಪರಿವರ್ತಕಗಳನ್ನು ಬದಲಾಯಿಸಲಾಗಿರುತ್ತದೆ ಎಂದರು.
ತೋಟದ ಮನೆಗಳಿಗೂ ವಿಧ್ಯುತ ಸಂಪರ್ಕ ಕಲ್ಪಿಸುವ ಬೇಡಿಕೆ ಅನುಗುಣವಾಗಿ ಹೆಸ್ಕಾಂ ವತಿಯಿಂದ ಈಗಾಗಲೇ ಸಮಿಕ್ಷಾ ಕಾರ್ಯ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ತೋಟದ ಮನೆಗಳಿಗೂ ವಿಧ್ಯುತ ವಿತರಣೆಗೆ ಅಗತ್ಯದ ಕ್ರಮ ಕೈಗೊಳ್ಳಲಾಗುವದು ಎಂದು ನುಡಿದರು.
ಜಲಸಂಪನ್ಮೂಲ ಇಲಾಖೆ ಸಚಿವರಾದ ಗೋವಿಂದ ಕಾರಜೋಳ ಅವರು ಮಾತನಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಸಿಸ್ಟಂ ವ್ಯವಸ್ಥೆ ತುಂಬಾ ಹಿಂದುಳಿದಿದ್ದು 25 ಕೆ.ವಿ.ವಿದ್ಯುತ ಪರಿವರ್ತಕಗಳನ್ನು ಅಳವಡಿಸುವದರ ಜೊತೆಗೆ ರೈತರ ಅನುಕೂಲಕ್ಕಾಗಿ ದಿನದ ಇಪ್ಪತ್ತ ನಾಲ್ಕು ಗಂಟೆಯೂ ನಿರಂತರ ತ್ರೀಫೆಸ್ ವಿದ್ಯುತ ಪೂರೂಸುವಂತೆ ಮುಖ್ಯಂತ್ರಿಗಳಿಗೆ
ಮನವಿ ಸಲ್ಲಿಸಿದ ಅವರು ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಹೊಸ ಸ್ಟೇಶನಗಳ ನಿರ್ಮಾಣ ಮಾಡುವಂತೆ ಮುಖ್ಯ ಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು ಮಾತನಾಡಿ ಪ್ರತಿ ಮನೆಗೆ ನಿರಂತರ ಜ್ಯೊತಿ ನೀಡುವ ಈ ಯೋಜನೆಯಡಿ ವಿಧ್ಯುತ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ ಸಂಪರ್ಕ ಕೊಡುವ ಯೋಜನೆಯಾಗಿದೆ.
ರೈತರಿಗಾಗಿ ಅವಶ್ಯಕವಾಗಿ ಬೇಕಾದಂತಹ ರಸ್ತೆ. ನೀರು, ವಿದ್ಯುತ ಸಂಪರ್ಕ ಕಲ್ಪಿಸಿಕೊಡುವಂತೆ ಹಾಗೂ ಕಿತ್ತೂರ ತಾಲೂಕು ಹೊಸದಾಗಿ ಘೋಷಣೆ ಮಾಡಿದ್ದು ತಾಲೂಕಿನಲ್ಲಿ ಹೆಸ್ಕಾಂಗೆ ಬೇಕಾದ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಹು.ವಿ.ಸ.ಕಂ.ನಿ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಮತಿ ಭಾರತಿ ಡಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸರ್ಕಾರದ ವಿಧಾನಪರಿಷತ್ತಿನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ,ಕೆ..ಎಂ.ಎಫ್ ನಿರ್ದೆಶಕ ಡಾ.ಕೆ.ಎಸ್‌ಪರಮಣ್ಣವರ. ದಾಸ್ತಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಉಮೇಶ ಸಿದ್ರಾಮನಿ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ, ಕ.ವಿ.ಪ್ರ.ನಿ.ನಿ. ವ್ಯವಸ್ಥಾಪಕ ನಿರ್ದೆಶಕಿ ಡಾ.ಎನ್.ಮಂಜುಳಾ, ಜಿಲ್ಲಾಧಿಕಾರಿ ಆರ್. ವೆಂಜಟೇಶಕುಮಾರ, ಜಿಲ್ಲಾ ಪಂಚಾಯತ ಸಿ.ಇ.ಓ ದರ್ಶನ ಎಚ್.ವಿ. ಸೇರಿದಂತೆ ಹು.ವಿ.ಸ.ಕಂ.ನಿ ನಿರ್ದೆಶಕರುಗಳು. ಸಾರ್ವಜನಿಕರು ಉಪಸ್ಥಿತರಿದ್ದರು. ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿನಿಯರು ಪಡಿಸಿದರು.
ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರುದಾಸ್ತಿಕೊಪ್ಪ ಗ್ರಾಮದ ಶ್ರೀಮತಿ ಬಾಯವ್ವ ಶಿದ್ರಾಮನಿ ಅವರ ಮನೆಯಲ್ಲಿ ವಿಧ್ಯುತ ಗುಂಡಿ ಒತ್ತುವ ಮೂಲಕ ಯೋಜನೆಗೆ ಚಾಲನೆ ನೀಡಿ ಫಲಾನುಭವಿಗಳಿಗೆ ಪತ್ರ ವಿತರಿಸಿದರು.