ಏಕನಾಥ ಸಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ
ಬೆಳಗಾವಿ : ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಶಿವಸೇನೆ ಮುಖಂಡ ಏಕನಾಥ ಸಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಗಲಿದ್ದು ಅವರ ಹೆಸರನ್ನು ಬಿಜೆಪಿಯ ದೇವೇಂದ್ರ ಫಡ್ನವೀಸ್ ಘೋಷಣೆ ಮಾಡಿದ್ದಾರೆ.
ಹೌದು ಶಿವಸೇನೆ ಸಮ್ಮಿಶ್ರ ಸರ್ಕಾರದಿಂದ ಸಿಡೆದೆದ್ದು ಅಸಮಾಧಾನ ಹೊಂದಿದ್ದ ಬೃಹತ್ ಶಾಸಕರನ್ನು ಕರೆತಂದು ಸರ್ಕಾರ ಕೆಡವಲು ಯಶಸ್ವಿಯಾಗಿದ್ದ ಏಕನಾಥ ಸಿಂಧೆ ಮಹಾರಾಷ್ಟ್ರದ ನೂತನ ಸಿಎಂ ಆಗಲಿದ್ದಾರೆ. ಕಳೆದ ಹದಿನೈದು ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಮಹಾರಾಷ್ಟ್ರ ರಾಜಕೀಯ ಬೆಳವನಿಗೆ ಸಿಂಧೆ ಮೂಲಕ ಅಂತ್ಯವಾಗಿದೆ.