ಸುವರ್ಣ ಕರ್ನಾಟಕ ಬ್ಲಡ್ ಸೆಂಟರ್ ಅಸೋಸಿಯೇಶನ್ ಉದ್ಘಾಟನೆ
ಬೆಳಗಾವಿ : ಸುವರ್ಣ ಕರ್ನಾಟಕ ಬ್ಲಡ್ ಸೆಂಟರ್ ಅಸೋಸಿಯೇಶನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿರುವ ಡಾ.ಅಪ್ಪಾಸಾಹೆಬ ನರಟ್ಟಿ ಸಂಘಟನೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಸಹಾಯಕ ಔಷಧೀಯ ನಿಯಂತ್ರಣ ರಘುರಾಮ್ ,ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷ ಎಸ್ ಬಿ ಕುಲಕರ್ಣಿ, ಕೆ.ಎಲ್ .ಇ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಶ್ರೀಕಾಂತ್ ವಿರಗಿ,ಇಂಪೀರಿಯಲ್ ಬಯೋಟೆಕ್ ಲಿಮಿಟೆಡ್ ನಿರ್ದೇಶಕರ ಸುಮಿತ್ ,ಆರೋಗ್ಯ ಸಚಿವರ ವಿಶೇಷಾಧಿಕಾರಿಗಳಾಗಿರುವ ಗಿರಿಗೌಡರ್ ಮತ್ತು ಆನಂದ ಅತಿಥಿ ಗಳಾಗಿ ಆಗಮಿಸಿದ್ದರು.
ಡಾ.ಪುರುಷೋತ್ತಮ ರೆಡ್ಡಿ ಮತ್ತು ಡಾ.ಆಶಿಶ್ ಧೂತ್ ಬ್ಲಡ್ ಬ್ಯಾಂಕ್ ಗಳಲ್ಲಿ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಕುರಿತಂತೆ ಉಪನ್ಯಾಸ ನೀಡಿದರು.ಪ್ರೇಮಬಿಂದು ಬ್ಲಡ್ ಬ್ಯಾಂಕ್ ಎಮ್. ಡಿ .ವಿ.ಎಮ್ .ಹಿರೇಮಠ ,ಬೆಳಗಾವಿ ಬ್ಲಡ್ ಸೆಂಟರ್ ಎಮ್ .ಡಿ .ಗಿರೀಶ್ ಬುಡರಕಟ್ಟಿ ,ಆನಂದ ಜಿಗಜಿನ್ನಿ ಮೊದಲಾದವರು ಉಪಸ್ಥಿತರಿದ್ದರು
ಧ್ಯೇಯ ಮತ್ತು ಉದ್ದೇಶಗಳು :
1)ಸುರಕ್ಷಿತ ರಕ್ತ ಪೂರೈಕೆಗಾಗಿ ರಕ್ತ ಸಂಗ್ರಹ ಕೇಂದ್ರಗಳಲ್ಲಿ ಗುಣಮಟ್ಟದ ನಿರ್ವಹಣೆ ಕುರಿತು ಅರಿವು ಮೂಡಿಸುವದು.
2)ಗ್ರಾಮೀಣ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವಯಂ ಪ್ರೇರಿತ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಮೂಲಕ ರಕ್ತ ದಾನ ಪ್ರಕ್ರಿಯೆಯನ್ನು ಸರಳವಾಗಿಸುವದು
3)ಗ್ರಾಮೀಣ ಭಾಗಗಳು ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ , ನೇತ್ರ ಚಿಕಿತ್ಸಾ ಶಿಬಿರ , ಎಲುಬು ಕೀಲುಗಳ ತಪಾಸಣಾ ಶಿಬಿರ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಶಿಬಿರಗಳ ಆಯೋಜನೆ
4)ತುರ್ತು ಸಂದರ್ಭಗಳಲ್ಲಿ ಸಕಾಲಿಕವಾಗಿ ರೋಗಿಗಳಿಗೆ ರಕ್ತ ಪೂರೈಸಲು ಅವಶ್ಯಕತೆ ಇದ್ದಲ್ಲಿ ಬ್ಲಡ್ ಸೆಂಟರ್ ಗಳ ಸ್ಥಾಪನೆ
5)ಗ್ರಾಮೀಣ ಭಾಗಗಳಲ್ಲಿ ಬಡ ಜನರಿಗಾಗಿ ಉಚಿತ ಆಸ್ಪತ್ರೆಗಳ ನಿರ್ಮಾಣ
6)ಅಪಘಾತ ನೈಸರ್ಗಿಕ ತುರ್ತು ಪರಿಸ್ಥಿತಿಯಲ್ಲಿ ಮತ್ತು ಪಕೃತಿ ವಿಕೋಪದ ಸಂದರ್ಭಗಳಲ್ಲಿ ಜನರಿಗೆ ಅಹಾರ, ಜೀವನಾವಶ್ಯಕ ಸಾಮಗ್ರಿಗಳ ವಿತರಣೆ
7)ವಿಕಲ ಚೇತನರು,ಮಾನಸಿಕ ಅಸ್ವಸ್ಥರು,ದೌರ್ಜನ್ಯ ಕ್ಕೊಳಗಾದ ಮಹಿಳೆಯರಿಗೆ ನೆರವು ನೀಡುವದು
8)ಏಡ್ಸ ರೋಗಿಗಳಿಗಾಗಿ ಜಾಗೃತಿ ಕಾರ್ಯಗಳ ಆಯೋಜನೆ
9)ಬಡ ಮತ್ತು ಗ್ರಾಮೀಣ ಭಾಗದ ಜನರಿಗಾಗಿ ನರ್ಸಿಂಗ್, ಜಿ.ಎನ್.ಎಮ್,ಬಿ.ಎಸ್.ಇ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಮಹಾವಿದ್ಯಾಲಯಗಳ ಸ್ಥಾಪನೆ
ಈಗಾಗಲೇ ನೀಡುತ್ತಿರುವ ಉಚಿತ ಸೇವೆಗಳು :
1)NBTC/KSBTC ಮಾರ್ಗಸೂಚಿಯಡಿಯಲ್ಲಿ ಬ್ಲಡ್ ಸೆಂಟರ್ ಗಳು ರಾಜ್ಯಾದ್ಯಂತ ನಿರಂತರ ಉಚಿತ ಸೇವೆ ಒದಗಿಸುತ್ತಿವೆ
2)ತುರ್ತು ಪರಿಸ್ಥಿತಿ ಯಲ್ಲಿರುವ ರೋಗಿಗಳು ,ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿ ವರ್ಷವೂ ಒಂದು ಲಕ್ಷಕ್ಕಿಂತ ಅಧಿಕ ಯುನಿಟ್ ರಕ್ತವನ್ನು ರಾಜ್ಯಾದ್ಯಂತ ಪೂರೈಸಲಾಗುತ್ತಿದೆ
3)ಬ್ಲಡ್ ಸೆಂಟರ್ ಗಳು ಪ್ರತಿ ರಕ್ತ ದಾನ ಶಿಬಿರಳಲ್ಲಿ ಸಂಗ್ರಹಿಸಲಾದ ರಕ್ತದಲ್ಲಿ ೨೫ಪ್ರತಿಶತ ರಕ್ತವನ್ನು ಉಚಿತವಾಗಿ ಸರ್ಕಾರಿ ಆಸ್ಪತ್ರೆಯ ಬ್ಲಡ್ ಸೆಂಟರ್ ಗಳಿಗೆ ನೀಡುತ್ತಿದೆ
4)ಕ್ಯಾನ್ಸರ್, ಎಚ್ ಆಯ್ ವಿ,ಹಿಮೋಫೀಲಿಯಾ ಮತ್ತು ಥಲಸೀಮಿಯ ರೋಗಿಗಳಿಗೆ ಬ್ಲಡ್ ಸೆಂಟರ್ ಗಳು ರಕ್ತ ಪೂರೈಸುತ್ತಿವೆ
ಇದಲ್ಲದೆ ಪ್ರತಿ ಬ್ಲಡ್ ಸೆಂಟರ್ ಗಳು ಸಾಮಾಜಿಕ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿವೆ