ಶಿವಣ ದುಡ್ಡಲ್ಲಿ ಎಣ್ಣೆ ಪಾರ್ಟಿ ; ಐಶಾರಾಮಿ ರೆಸಾರ್ಟ್ ನಲ್ಲಿ ಇನ್ಫ್ಲುಯೆನ್ಸರ್ ಸಭೆ – ಉಡುಗೊರೆ ಪಡೆದವರಿಗೆ ಡವಡವ..!

ಬೆಳಗಾವಿ : ಮುಂದಿನ ಮುಖ್ಯಮಂತ್ರಿ ಆಗ್ಲೇನ್ ಎನ್ನುತ್ತಾ ಜನರ ಹಣದಲ್ಲಿ ಭರ್ಜರಿ ಮಜಾ ಮಾಡಿದ ಶಿವಾನಂದ ನೀಲಣ್ಣನವರ ಪ್ರಕರಣ ಸಧ್ಯ ಸಿಐಡಿ ತನಿಖೆಯಲ್ಲಿದೆ. ಈ ನಡುವೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Influencer) ಗಳು ಶಿವಾನಂದ ನೀಲಣ್ಣನವರ ಹಣದಲ್ಲಿ ಐಷಾರಾಮಿ ಹೊಟೇಲ್ ನಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಲ್ಲದೆ ದುಬಾರಿ ಬೆಲೆಯ ಉಡುಗೊರೆ ಪಡೆದಿರುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಹೌದು ಬೆಳಗಾವಿ ನಗರದಲ್ಲಿ ಕಳೆದ ಮೇ. 17 ರಂದು ಸ್ವಚ್ಛ ಬೆಳಗಾವಿ ಹೆಸರಲಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ಶಿವಂ ಅಸೋಸಿಯೇಟ್ಸ್ ತಯಾರಿ ನಡೆಸಿತ್ತು. ಅಷ್ಟರಲ್ಲೇ ಕಾನೂನು ಉಲ್ಲಂಘನೆ ಮಾಡಿ ಕೋಟ್ಯಾಂತರ ರೂ. ಠೆವಣಿ ಪಡೆದ ಆರೋಪದ ಮೇಲೆ ಬೆಳಗಾವಿ ಜಿಲ್ಲಾಡಳಿತ ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಿತ್ತು.
ಸಧ್ಯ ಸಿಐಡಿ ವಶದಲ್ಲಿರುವ ಶಿವಾನಂದ ನೀಲಣ್ಣನವರ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿ ಹೊರಬಂದಿವೆ ಎಂದು ಹೇಳಲಾಗುತ್ತಿದೆ. ಈ ನಡುವೆ ಶಿವಾನಂದ ನೀಲಣ್ಣನವರ ಕಡೆಯಿಂದ ದುಬಾರಿ ಬೆಲೆಯ ಉಡುಗೊರೆ ಪಡೆದವರಿಗೂ ಸಿಐಡಿ ತಂಡ ಶಾಕ್ ನೀಡಿದ್ದು ನೋಟಿಸ್ ಜಾರಿ ಮಾಡಿದೆ.
ಇನ್ನು ಶಿವಾನಂದ ನೀಲಣ್ಣನವರ ಹಣದಲ್ಲಿ ಬಿಟ್ಟಿ ಶೋಕಿ ಮಾಡಿ ಐಷಾರಾಮಿ ಹೊಟೇಲ್ ನಲ್ಲಿ ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿವರಿಗೂ ಡವಡವ ಶುರುವಾಗಿದೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳ ತಂಡವೊಂದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಐಶಾರಾಮಿ ಹೊಟೇಲ್ ನಲ್ಲಿ ಮೀಟಿಂಗ್ ನಡೆಸಿತ್ತು. ಈ ಸಂದರ್ಭದಲ್ಲಿ ಇವರಿಗೆಲ್ಲ ಉಡುಗೊರೆ ಹಾಗೂ ಹಣದ ಆಮಿಷವನ್ನು ಶಿವಂ ಅಸೋಸಿಯೇಟ್ಸ್ ನೀಡಿತ್ತು ಎಂದು ಹೇಳಲಾಗುತ್ತಿದೆ.

ಬೆಳಗಾವಿ ನಗರದ ಹೊರವಲಯದಲ್ಲಿರುವ ರೆಜೆಂಟಾ (Regenta) ರೆಸಾರ್ಟ್ ನಲ್ಲಿ ಶಿವಂ ಅಸೋಸಿಯೇಟ್ಸ್ ವತಿಯಿಂದ ಬೆಳಗಾವಿಯ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮೀಟಿಂಗ್ ಕರೆಯಲಾಗಿತ್ತು. ಈ ಸಭೆಯ ಪ್ರಮುಖ ಉದ್ದೇಶ ಶಿವಾನಂದ ನೀಲಣ್ಣನವರನನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಮೋಟ್ ಮಾಡುವುದಾಗಿತ್ತು.
ಐಷಾರಾಮಿ ಹೊಟೇಲ್ ನಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 25 ಕ್ಕೂ ಅಧಿಕ ಇನ್ಫ್ಲುಯೆನ್ಸರ್ ಗಳು ಭಾಗವಹಿಸಿದ್ದರು. ಎಲ್ಲರಿಗೂ ರಾತ್ರಿ ಅಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಭರ್ಜರಿ ಪಾರ್ಟಿದ ಮಾಡಿದ ಇವರು ಜನರ ಠೇವಣಿ ಹಣದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಈ ವೇಳೆ ಸ್ವಚ್ಛ ಬೆಳಗಾವಿ ಕಾರ್ಯಕ್ರಮವನ್ನು ಹೆಚ್ಚು ಪ್ರಚಾರ ಮಾಡಿ ಶಿವಾನಂದ ನೀಲಣ್ಣನವರನನ್ನು ಮತ್ತಷ್ಟು ಜನರಿಗೆ ಪರಿಚಯಿಸುವ ಟಾರ್ಗೆಟ್ ಅನ್ನು ಆಯೋಜಕರು ಈ ಇನ್ಫ್ಲುಯೆನ್ಸರ್ ಗಳಿಗೆ ನೀಡಿದ್ದರು. ಜೊತೆಗೆ ಎಲ್ಲವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟರೆ ಭರ್ಜರಿ ಉಡುಗೊರೆಯ ಆಮಿಷವನ್ನು ಇಲ್ಲಿ ನೀಡಲಾಗಿತ್ತು.
ಕಂಡವರ ದುಡ್ಡಲ್ಲಿ ಮಜಾ ಮಾಡಿ ಪುಕ್ಸಟ್ಟೆ ಪ್ರಚಾರ ಕೊಟ್ಟರೆ ನಮಗೇನು ಆಗಬೇಕು? ಹಣ ಸಿಕ್ಕರೆ ಸಾಕು ಎನ್ನುವ ಈ ಇನ್ಫ್ಲುಯೆನ್ಸರ್ ತಂಡ ಅವರು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದ್ದಾರೆ. ಕೊಂಚವೂ ಸಾಮಾಜಿಕ ಜವಾಬ್ದಾರಿ ಇಲ್ಲದ
ಇನ್ಫ್ಲುಯೆನ್ಸರ್ ಗಳು ಮಜಾ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೀಟಿಂಗ್ ನಲ್ಲಿ ಭಾಗವಹಿಸಿದ್ದ ಇನ್ಫ್ಲುಯೆನ್ಸರ್ ಗಳು ಸಾಮಾಜಿಕ ಜಾಲತಾಣದಲ್ಲಿ ಶಿವಾನಂದ ನೀಲಣ್ಣನವರನ್ನು ಹೊಗಳಿ ಸಾಕಷ್ಟು ವೀಡಿಯೋ ಹರಿಬಿಟ್ಟಿದ್ದಾರೆ. ಇದರಿಂದ ಅದೆಷ್ಟೋ ಜನ ಶಿವಣ ಬಳಿ ಠೇವಣಿ ಇಟ್ಟಿದ್ದಾರೆ ದೀವರಿಗೆ ಗೊತ್ತು. ಸಾಮಾಜಿಕ ಜವಾಬ್ದಾರಿ ಇಲ್ಲದೆ ಹಣದ ಆಸೆಗಾಗಿ
ಇನ್ಫ್ಲುಯೆನ್ಸರ್ ಗಳು ಆಡುವ ಆಟಕ್ಕೆ ಕಾನೂನು ಪಾಠ ಹೇಳುತ್ತದೆಯಾ ಎಂಬುದನ್ನು ಕಾದು ನೋಡಬೇಕು.

