ಕಾರು ಅಪಘಾತ ಅಥಣಿಯ ಇಬ್ಬರು ಯುವಕರು ಸಾವು : ಓರ್ವನಿಗೆ ಗಂಭೀರ ಗಾಯ
ಮೂಡಲಗಿ : ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಉಂಟಾದ ಭೀಕರ ಕಾರು ಅಪಘಾತದಲ್ಲಿ ಅಥಣಿ ಪಟ್ಟಣದ ಇಬ್ಬರು ಯುವಕರು ಸಾವನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ವಿನಾಯಕ ಕಾವೇರಿ (21), ಮತ್ತು ಮಾಳಿ (22) ಇಬ್ಬರು ಯುವಕರು ಸ್ಥಳದಲ್ಲೇ ಮೃತರಾಗಿದ್ದು, ಈರಯ್ಯ ಹಿರೇಮಠ ಗಂಭೀರವಾಗಿ ಗಾಯಗೊಂಡಿದ್ದು ಹಾರೂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈರಯ್ಯ ಎಂಬುವರ ತಾಯಿಯನ್ನು ಹುಬ್ಬಳ್ಳಿಗೆ ಬಿಟ್ಟು ವಾಪಸ್ ಅಥಣಿಗೆ ಬರುವ ಸಂದರ್ಭದಲ್ಲಿ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.