ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಶಾಸಕ ಶ್ರೀಮಂತ ಪಾಟೀಲ್ : ಹೇಳಿಕೆಯಿಂದ ಯೂಟರ್ನ್
ಬೆಳಗಾವಿ : ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡರಂತೆ ಹಾಗಾಗಿದೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಪರಿಸ್ಥಿತಿ. ಬಿಜೆಪಿ ಸೇರುವ ಸಂದರ್ಭದಲ್ಲಿ ನನಗೆ ಹಣದ ಆಫರ್ ಇಟ್ಟಿದ್ದರು ಎಂಬ ಹೇಳಿಕೆ ನೀಡಿ ವಿರೋಧ ಪಕ್ಷದವರಿಗೆ ಆಹಾರವಾಗಿದ್ದ ಇವರು ಸಧ್ಯ ಯೂಟರ್ನ್ ಹೊಡೆದಿದ್ದಾರೆ.
ಹೌದು ನಿನ್ನೆಯಷ್ಟೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಶಾಸಕ ಶ್ರೀಮಂತ ಪಾಟೀಲ್ ಸಚಿವಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕಿದ್ದರು. ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ನಮಗೆ ಹಣದ ಆಫರ್ ನೀಡಿದ್ದರು ಆದರೆ ನಾವು ಉತ್ತಮ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೇವು ಎಂದು ಹೇಳಿಕೆ ನೀಡಿದ್ದರು.
ಶ್ರೀಮಂತ ಪಾಟೀಲ್ ನೀಡಿದ್ದ ಈ ಒಂದು ಹೇಳಿಕೆ ವಿಪಕ್ಷಗಳಿಗೆ ಆಹಾರವಾಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಜೊತೆಗೆ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಹಣದ ಮೂಲವನ್ನು ಕೆದಕುವ ಪ್ರಯತ್ನ ಮಾಡಿದ್ದರು. ಯಾವಾಗ ಶ್ರೀಮಂತ ಪಾಟೀಲ್ ಹೇಳಿಕೆ ಎಲ್ಲೆಡೆ ಪ್ರತಿಧ್ವನಿಸಲು ಪ್ರಾರಂಭವಾಯಿತು ಇತ್ತ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ನಿನಗೆ ಯಾರು ಹಣ ಕೊಡಲು ಬಂದಿದ್ದರು ಎಂದು ಕೇಳುವೆ : ಶ್ರೀಮಂತ ಪಾಟೀಲ್ ಹೇಳಿಕೆಗೆ ಸವದಿ ಪ್ರತ್ಯುತ್ತರ – Belagavivoice https://belagavivoice.com/laxman_savadi_reaction_in_athani/#.YT3Kv5tUwrc.whatsapp
ಆಫರ್ ಇಟ್ಟವರು ಯಾರೆಂದು ಕೇಳುವೆ ಎಂದಿದ್ದ ಸವದಿ : ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಶ್ರೀಮಂತ ಪಾಟೀಲ್ ಹೇಳಿಕೆಗೆ ಟಾಂಗ್ ನೀಡಿದ್ದರು. ಅವರಿಗೆ ಹಣದ ಆಫರ್ ಕೊಟ್ಟವರು ಯಾರು ಎಂದು ಕೇಳುವೆ ಎಂದಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿದ ಶಾಸಕ ಶ್ರೀಮಂತ ಪಾಟೀಲ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದು ಯೂಟರ್ನ್ ಹೊಡೆದಿದ್ದಾರೆ. ಸಧ್ಯ ಇರಲಾರದೆ ಇರುವೆ ಬಿಟ್ಟುಕೊಂಡವರಂತಾಗಿದೆ ಶಾಸಕರ ಪರಿಸ್ಥಿತಿ.