Select Page

ನಿನಗೆ ಯಾರು ಹಣ ಕೊಡಲು ಬಂದಿದ್ದರು ಎಂದು ಕೇಳುವೆ : ಶ್ರೀಮಂತ ಪಾಟೀಲ್ ಹೇಳಿಕೆಗೆ ಸವದಿ ಪ್ರತ್ಯುತ್ತರ

ನಿನಗೆ ಯಾರು ಹಣ ಕೊಡಲು ಬಂದಿದ್ದರು ಎಂದು ಕೇಳುವೆ : ಶ್ರೀಮಂತ ಪಾಟೀಲ್ ಹೇಳಿಕೆಗೆ ಸವದಿ ಪ್ರತ್ಯುತ್ತರ

ಅಥಣಿ : ಬಿಜೆಪಿ ಸರ್ಕಾರದ ರಚನೆ ಸಂದರ್ಭದಲ್ಲಿ ನನಗೆ ಹಣ ಎಷ್ಟು ಬೇಕೆಂದು ಕೇಳಿದ್ದರು ಎಂಬ ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ. ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಭೇಟಿಯಾದಾಗ ನಿನಗೆ ಯಾರು ಹಣ ಕೇಳಲು ಬಂದಿದ್ದರು ಎಂದು ಕೇಳುವೆ ಎಂದರು.

ಅಥಣಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಇವರು. ಶ್ರೀಮಂತ ಪಾಟೀಲ್ ಹೇಳಿಕೆಯನ್ನು ನಾನು ಗಮನಿಸಿರುವೆ. ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ಆದರೆ ಯಾರು ಹಣದ ಆಮಿಷ ನೀಡಿದ್ದರು ಎಂದು ಹೇಳಿಲ್ಲ. ಭೇಟಿಯಾದಾಗ ನಿನಗೆ ಯಾರು ಹಣ ನೀಡಲು ಬಂದಿದ್ದರು ಎಂಬುದರ ಕುರಿತು ಕೇಳುವೆ ಎಂದರು.

ಸಚಿವ ಸ್ಥಾನದ ಅಸಮಾಧಾನ ಹೊಂದಿರುವವರ ಕುರಿತು ಮಾತನಾಡಿದ ಇವರು. ಸಂವಿಧಾನದಲ್ಲಿ ಕೇವಲ 34 ಶಾಸಕರಿಗೆ ಮಾತ್ರ ಸಚಿವಸ್ಥಾನ ನೀಡಲು ಅವಕಾಶ ಇದೆ. ಎಲ್ಲರಿಗೂ ಸಚಿವರಾಗುವ ಕನಸು ಇರುತ್ತದೆ ಆದರೆ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರದ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಗೆ ಕರೆತರಲು ಲಕ್ಷ್ಮಣ ಸವದಿ ಅವರೇ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ನಿನ್ನೆ ಶ್ರೀಮಂತ ಪಾಟೀಲ್ ಹೇಳಿಕೆಯಿಂದ ಬಿಜೆಪಿ ನಾಯಕರಿಗೆ ಇರುಸು ಮುರುಸು ಉಂಟಾಗಿದ್ದು ಸುಳ್ಳಲ್ಲ.

ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಹಣದ ಆಮಿಷ ಒಡ್ಡಿದ್ದು ನಿಜ : ಶಾಸಕ ಶ್ರೀಮಂತ ಪಾಟೀಲ್ https://belagavivoice.com/kagavad_mla_shrimant_patil_reaction/#.YT3MRFdbNa4.whatsapp

Advertisement

Leave a reply

Your email address will not be published. Required fields are marked *

error: Content is protected !!