ಹುಟ್ಟಿದ ಮಗುವನ್ನು ರಸ್ತೆಗೆ ಎಸೆದ ಕಿರಾತಕರು ; ನರಳಾಡಿ ಪ್ರಾಣಬಿಟ್ಟ ಕಂದಮ್ಮ
ಬೆಳಗಾವಿ : ಸಾಮಾನ್ಯವಾಗಿ ಒಂದು ಹೆಣ್ಣು ತಾಯ್ತನ ಅನುಭಾವ ಪಡೆಯಲು ಅದೆಷ್ಟೋ ಜನ್ಮ ಪುಣ್ಯದ ಫಲ ಹೊಂದಿರಬೇಕು. ಆದರೆ ಇಲ್ಲೊಬ್ಬ ತಾಯಿ ಹೆತ್ತ ಗಂಡು ಮಗುವನ್ನು ರಸ್ತೆಯ ಪಕ್ಕದ ಕಸದ ತೊಟ್ಟಿಗೆ ಎಸೆದಿರುವ ಅಮಾನವೀಯ ಘಟನೆ ನಡೆದಿದೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿ 24 ಗಂಟೆ ಒಳಗೆ ಹುಟ್ಟಿದ್ದ ನವಜಾತ ಶಿಶುವನ್ನು ಎಸೆದಿರುವ ಘಟನೆ ಜರುಗಿದೆ. ಶಿಶು ಗಂಡಾಗಿದ್ದು ಪ್ರಾಣ ಬಿಟ್ಟಿದೆ.
ಇನ್ನೂ ಈ ಕುರಿತು ಎಸೆದವರ ಮಾಹಿತಿ ತಿಳಿದುಬಂದಿಲ್ಲ. ಸಾರ್ವಜನಿಕರು ರಸ್ತೆ ಪಕ್ಕದ ಕಸದಲದಲಿ ಶಿಶುವನ್ನು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬದುಕಲ್ಲಿ ಮಕ್ಕಳಿಲ್ಲ ಎಂಬ ಕೊರಗಲ್ಲಿ ಅದೆಷ್ಟೋ ಮಹಿಳೆಯರು ಮನನೊಂದು ಜೀವನ ಸಾಗಿಸುತ್ತಾರೆ. ಇನ್ನೂ ಹಲವರು ದೇವರು ಬಳಿ ಹರಕೆ ಕಟ್ಟಿಕೊಂಡು ಮಕ್ಕಳ ನಿರೀಕ್ಷೆಯಲ್ಲಿ ಇರುತ್ತಾರೆ.
ಆದರೆ ಕೆಲವರಿಗೆ ಮಕ್ಕಳ ವರ ಕೊಟ್ಟರು ಅದನ್ನು ಸರಿಯಾಗಿ ಬಳಸಿಕೊಳ್ಳಲ್ಲ. ಹುಟ್ಟಿದ ಮಗುವನ್ನು ರಸ್ತೆ ಮೇಲೆ ಎಸೆಯುವುದು ಅತ್ಯಂತ ಹೀನ ಕೃತ್ಯ. ಈ ಕೂಡಲೇ ಪೊಲೀಸರು ಸರಿಯಾದ ತನಿಖೆ ನಡೆಸಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು.