VIDEO : ಬಿಜೆಪಿ ಶಾಸಕನ ಪ್ರೇಮ ಸಂಭಾಷಣೆ ವೈರಲ್ : ಪ್ರೀತಿಸಿ ಮದುವೆಯಾಗುವುದಾಗಿ ವಂಚಿಸಿದರಾ ಶಾಸಕ..?
ಕೊಪ್ಪಳ / ಕನಕಗಿರಿ : ಬಿಜೆಪಿ ಶಾಸಕ ಬಸವರಾಜ ದಡೆಸಗೂರು ಮತ್ತು ಮಹಿಳಾ ಅಧಿಕಾರಿ ನಡುವಿನ ಪ್ರೇಮ ಸಂಭಾಷಣೆ ವೈರಲ್ ಆಗಿದ್ದು ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.
ಕನಕಗಿರಿ ಸಿಡಿಪಿಒ ಅಧಿಕಾರಿ ನನಗೆ ಶಾಸಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಜೊತೆಗೆ ಮದುವೆಯಾಗುವುದಾಗಿ ಪ್ರೀತಿಸಿ ವಂಚನೆ ಮಾಡಿರುವ ಆರೋಪವನ್ನು ಇವರು ಮಾಡಿದ್ದಾರೆ. ಜೊತೆಗೆ ಶಾಸಕರ ಬೆಂಬಲಿಗರು ಅಧಿಕಾರಿ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಾತನಾಡಿರುವ ಆಡಿಯೋ ಸಧ್ಯ ಬಾರಿ ವೈರಲ್ ಆಗಿದೆ.