Select Page

Advertisement

ಬೆಳಗಾವಿ ಪತ್ರಕರ್ತರ ಸಂಘದ ಸಂಯೋಜಕರಾಗಿ ವಿನಾಯಕ ಮಠಪತಿ ಆಯ್ಕೆ

ಬೆಳಗಾವಿ ಪತ್ರಕರ್ತರ ಸಂಘದ ಸಂಯೋಜಕರಾಗಿ ವಿನಾಯಕ ಮಠಪತಿ ಆಯ್ಕೆ

ಬೆಳಗಾವಿ ಪತ್ರಕರ್ತರ ಸಂಘದ ನೂತನ ಸಂಯೋಜಕರಾಗಿ
ವಿನಾಯಕ ಮಠಪತಿ, ಅಧ್ಯಕ್ಷರನ್ನಾಗಿ ಮಹೇಶ ವಿಜಾಪುರ ಹಾಗೂ ಉಪಾಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಮುಗಳಿ ಹಾಗೂ ಗೌರವಾಧ್ಯಕ್ಷರನ್ನಾಗಿ ಋಷಿಕೇಶ ಬಹದ್ದೂರ ದೇಸಾಯಿ ಸೇರಿದಂತೆ ಇನ್ನೀತರ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಗರದಲ್ಲಿ ಶನಿವಾರ ನಡೆದ ಬೆಳಗಾವಿ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಸಲಹೆಗಾರರನ್ನಾಗಿ ಕೇಶವ ಆದಿ, ವಿಲಾಸ ಜೋಶಿ,   ಕೋಶಾಧ್ಯಕ್ಷರನ್ನಾಗಿ ರಾಯಣ್ಣ. ಆರ್.ಸಿ., ನೌಶಾದ ಬಿಜಾಪೂರ,  ಕಾರ್ಯಾಧ್ಯಕ್ಷರಾಗಿ ರಾಜು ಗವಳಿ ಹಾಗೂ ರಾಜು ಟೋಪಣ್ಣವರ, ಕಾರ್ಯದರ್ಶಿಯಾಗಿ  ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಯನ್ನಾಗಿ ರಾಜಶೇಖರಯ್ಯ ಹಿರೇಮಠ ಹಾಗೂ ಪಾರೇಶ ಭೋಸಲೆ,  ಸಂಯೋಜಕರನ್ನಾಗಿ  ಕೀರ್ತಿ ಕಾಸರಗೂಡು, ವಿನಾಯಕ ಮಠಪತಿ, ಖಜಾಂಚಿಯಾಗಿ ಅಶೋಕ ಮುದ್ದಣ್ಣವರ, ಹೀರಾಮಣಿ ಕಂಗ್ರಾಳಕರ, ನಿರ್ದೇಶಕರಾಗಿ ಜಗದೀಶ ವಿರಕ್ತಮಠ, ಸುನೀಲ್ ಪಾಟೀಲ ಹಾಗೂ ಮಂಜುನಾಥ ಕೋಳಿಗುಡ್ಡ ಹಾಗೂ  ಕಾರ್ಯಕಾರಣಿ ಸದಸ್ಯರನ್ನಾಗಿ ಮಹೇಶ ಭಗಿರಥ, ಭೈರೊಬಾ ಕಾಂಬಳೆ, ಸಂಜಯ ಸೂರ್ಯವಂಶಿ, ವಿಜಯ ಮೋಹಿತೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಂತರ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ  ಹಿರಿಯ ಪತ್ರಕರ್ತರರಾದ ಋಷಿಕೇಶ ದೇಸಾಯಿ, ಕೇಶವ ಆದಿ, ರಾಜು ಗವಳಿ, ಮಹೇಶ ವಿಜಾಪುರ, ರಾಯಣ್ಣ, ಆರ್.ಸಿ., ಮಾತನಾಡಿ, ಪತ್ರಕರ್ತರಲ್ಲಿ ಭಾಷಾ, ಹುದ್ದೆಗಳ ಭಿನ್ನಾಭೀಪ್ರಾಯ ಇರಬಾರದು, ನಾವೇಲ್ಲರೂ ಒಂದೇ ಎಂದು ಸಮಾಜ ಮುಖಿ ಕಾರ್ಯದಲ್ಲಿ ತೊಡಗಬೇಕು. ಕೇವಲ ವರದಿಗಾರರು ಹಾಗೂ ಮಾನ್ಯತಾ ಕಾರ್ಡ್ ಹೊಂದಿದವರನ್ನು ಪತ್ರಕರ್ತರು ಎಂದು ಗುರಿಸದೇ, ಛಾಯಾಗ್ರಾಹಕರು ಹಾಗೂ ಉಪ ಸಂಪಾದಕರು ಹಾಗೂ ಮಾನ್ಯತಾ ಕಾರ್ಡ್ ಇಲ್ಲದೇ ಇರುವ ಪತ್ರಕರ್ತರನ್ನು ನಮ್ಮೊಂದಿಗೆ ಕರೆದುಕೊಂಡು ಹೋಗಬೇಕು. ಅಲ್ಲದೇ ಸರ್ಕಾರದಿಂದ ಸಿಗುವ ಸೌಲಭ್ಯದ ಜತೆಗೆ ಸಂಘದಿಂದಲೂ ಉಪಸಂಪಾದಕರಿಗೆ ಹಾಗೂ ಛಾಯಾಗ್ರಾಹಕರಿಗೆ, ಮಾನ್ಯತಾ ಕಾರ್ಡ್ ಇಲ್ಲದವರಿಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಮಾಡಲು ಯೋಜನೆಗಳನ್ನೂ ರೂಪಿಸಬೇಕಿದೆ. ಜತೆಗೆ ಬರುವ ದಿನಗಳಲ್ಲಿ ಹಂತ ಹಂತವಾಗಿ ಯೋಜನೆಗಳನ್ನೂ ರೂಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯದರ್ಶಿ ಸುರೇಶ ನೇರ್ಲಿ ಮಾತನಾಡಿ, ಬೆಳಗಾವಿ ಪತ್ರಕರ್ತರ ಸಂಘ ಸ್ಥಾಪನೆಯಾಗಿ ಎರಡು ವರ್ಷ ಪೂರೈಯಿಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಹಾವಳಿ ಸಮಯದಲ್ಲಿ ನಿರ್ಗಮಿತ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಹಾಗೂ ಛಾಯಾಗ್ರಾಹಕರಿಗೆ ದಾನಿಗಳ ಸಹಕಾರೊಂದಿಗೆ ಆಹಾರದ ಕಿಟ್ ನೀಡಲಾಗಿತ್ತು. ಎಲ್ಲದಕ್ಕೂ ಮೀಗಿಲಾಗಿ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಪತ್ರಕರ್ತರ ಕಲ್ಯಾಣ ನಿಧಿಯನ್ನು ಮೀಸಲಿಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಲ್ಲಿ ಮನವಿ ಮಾಡಿದ ಸಮಯದಲ್ಲಿ ನಮ್ಮ ಮನವಿಗೆ ಸ್ಪಂಧಿಸಿ ಹಣ ಮೀಸಲಿಟ್ಟರು. ಅಲ್ಲದೇ ಮಾನ್ಯತಾ ಕಾರ್ಡ್ ಹೊಂದಿದ ಎಲ್ಲ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ ಹಾಗೂ ವಿಡಿಯೋಗ್ರಾಫರ್‌ಗೆ  ಆರೋಗ್ಯ ವಿಮೆ ಕಾರ್ಡ್‌ಗಳನ್ನು ನೀಡುವವಲ್ಲಿಪ್ರಮುಖ ಪಾತ್ರವಹಿಸಿದೆ. ಇನ್ನೂಮುಂದೆಯೂ ಎಲ್ಲ ಪತ್ರಕರ್ತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟಿಕೊಂಡು ಯೋಜನೆಗಳನ್ನು ರೂಪಿಸೋಣ ಎಂದರು.

Advertisement

Leave a reply

Your email address will not be published. Required fields are marked *

error: Content is protected !!