Video – ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ; ವಕೀಲರು ಹೇಗೆ ಥಳಿಸಿದ್ರು ನೋಡಿ
ಬೆಳಗಾವಿ : ಕೊಲೆ ಪ್ರಕರಣ ಅಪರಾಧಿಯೊಬ್ಬ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ವಕೀಲರು ಥಳಿಸಿರುವ ಘಟನೆ ಬುಧವಾರ ಬೆಳಗಾವಿ ನಗರದಲ್ಲಿ ನಡೆದಿದೆ.
ಕೊಲೆ ಪ್ರಕರಣದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಂಗಳೂರು ಮೂಲದ ಜಯೇಶ್ ಪೂಜಾರಿ ಎಂಬ ಅಪರಾಧಿ ಜಿಲ್ಲಾ ಕೋರ್ಟ್ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಈ ಸಂದರ್ಭದಲ್ಲಿ ಆರೋಪಿತನನ್ನು ಕೋರ್ಟ್ ನಲ್ಲಿ ನೆರೆದಿದ್ದ ವಕೀಲರೇ ಥಳಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2018 ರಲ್ಲಿ ಅಂದಿನ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಜಯೇಶ್ ಪೂಜಾರಿ ಎಂಬಾತನ್ನು ಹಿಂಡಲಗಾ ಜೈಲಿನಿಂದ ನಗರದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ವಿಚಾರಣೆ ಸಮಯಾವಕಾಶ ನೀಡದ ಹಿನ್ನಲೆಯಲ್ಲಿ ಈತ ನನ್ನನ್ನು ಪಾಕಿಸ್ತಾನದವನಂತೆ ನೋಡುತ್ತಿದ್ದಾರೆ ಎಂದು ಆಕ್ರೋಶಗೊಂಡು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾನೆ. ಈ ಸಂದರ್ಭದಲ್ಲಿ ವಕೀಲರು ಥಳಿಸಿದ್ದಾರೆ.
ಪ್ರಕರಣ ಕುರಿತು ಮಾಹಿತಿ ನೀಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್. ಕಳೆದ 2018ರ ಎಡಿಜಿಪಿ ಅಲೋಕಕುಮಾರ್ ಅವರಿಗೆ ಬೇದರಿಕೆ ಹಾಕಿದ್ದ ಜಾಕೀರ್ ಅಲಿಯಾಸ್ ಜಯೇಶ್ ಪೂಜಾರಿ ನ್ಯಾಯಾಲಯಕ್ಕೆ ವಿಚಾರಣೆ ಕರೆ ತಂದಾಗ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಅವನ ವಿಚಾರಣೆ ನಡೆಸಲಾಗುತ್ತದೆ.
ಜಾಕೀರ್ ಅಲಿಯಾಸ್ ಜಯೇಶ್ ಪೂಜಾರಿ ಮೂಲತಃ ಮಂಗಳೂರು ಮೂಲಕ ಆರೋಪಿಯಾಗಿದ್ದಾನೆ. ಆರೋಪಿ ಹೆಸರು ಬದಲಾಯಿಸಿಕೊಂಡಿರುವ ಕುರಿತು ತನಿಖೆ ನಡೆಯುತ್ತಿದೆ. ಜಯೇಶ್ ಪೂಜಾರಿ ಎರಡೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾನೆ.
ಹಿಂಡಲಗಾ ಕಾರಾಗೃಹದಲ್ಲಿ ಇರುವ ಈತನಿಗೆ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆ ತರಲಾಗಿತ್ತು ಆಗ ಅವನು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜ ಎಂದರು. ಜಯೇಶ್ ಕೇರಳಕ್ಕೆ ಹೋಗಿ ಇಸ್ಲಾಂ ಗೆ ಮತಾಂತರವಾಗಿದ್ದಾನೆ ಎನ್ನುವ ಮಾಹಿತಿ ಇದೆ. ಅದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.