
ಬೆಳಗಾವಿ : ಬಿಮ್ಸ್ ನಲ್ಲಿ ಬಾಣಂತಿ ಸಾವು

ಬೆಳಗಾವಿ : ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸರಣಿ ನಿರಂತರವಾಗಿ ಮುಂದುವರಿದಿದ್ದು, ಸಧ್ಯ ಮತ್ತೋರ್ವ ಬಾಣಂತಿ ಅಸುನೀಗಿದ್ದಾರೆ.
ಬೆಳಗಾವಿಯ ನಿಲಜಿ ಗ್ರಾಮದ ಅಂಜಲಿ (31) ಮೃತ ಬಾಣಂತಿ. ಹೆರಿಗೆ ನಂತರ ಬಿಪಿ ಕಡಿಮೆಯಾದ ಕಾರಣ ಬಾಣಂತಿ ಸಾವಣಪ್ಪಿದ್ದು, ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.
ನಿನ್ನೆ ಸಂಜೆ ಹೆರಿಗೆ ನೋವು ಕಾಣಿಕೊಂಡ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾಳೆ.