ಚಿಕ್ಕೋಡಿ : ಶಂಕಿತ ಡೆಂಗ್ಯೂ ಕಾಯಿಲಿಗೆ ಬಾಲಕಿ ಸಾವು
ಸಂಕೇಶ್ವರ : ಶಂಕಿತ ಡೆಂಗ್ಯು ಕಾಯಿಲೆಯಿಂದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ ನಡೆದಿರುವದು ವರದಿಯಾಗಿದೆ.
ಶ್ರೇಯಾ ಕೃಷ್ಣ ದವಡತೆ ಎಂಬ 9 ವರ್ಷದ ಬಾಲಿಕಿ ಈ ಕಾಯಿಲೆಗೆ ಮೃತಪಟ್ಟಿದ್ದಾರೆಂದು ತಿಳಿದಿದ್ದು, ಆದರೆ ಆದರೆ ಆದರೆ ಆರೋಗ್ಯ ಇಲಾಖೆ ಹಾಗೂ ಬಿಮ್ಸ್ ಆಸ್ಪತ್ರೆಯ ವೈದ್ಯರು ಮಾತ್ರ ಈ ಬಾಲಕಿಯ ಸಾವಿಗೆ ನಿಖರ ಕಾರಣ ಹಾಗು ವರದಿ ನೀಡದೆ ಕೇವಲ ಮೃತದೇಹವನ್ನು ನೀಡಿದ್ದಾರೆ ಎನ್ನಲಾಗಿದೆ.
ಈ ಬಾಲಕಿ ಕಳೆದ ಕೆಲವು ದಿನಗಳಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಉಪಚಾರ ಫಲಿಸದೆ ಬಾಲಕಿ ಅಸುನಿಗಿದ್ದಾಳೆ ಎಂದು ತಿಳಿದು ಬಂದಿದೆ.
ಬೆಳಗಾವಿ ಆಸ್ಪತ್ರೆಯಿಂದ ಮೃತ ಶ್ರೇಯಾ ಈತಳ ಮೃತದೇಹವನ್ನು ಮೃತರು ಸ್ವಗ್ರಾಮ ಸಂಕೇಶ್ವರಕ್ಕೆ ತರುತ್ತಿದ್ದು, ಬಾಲಕಿಯ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅದೇ ರೀತಿ ಪಟ್ಟಣದಲ್ಲಿ ಡೆಂಗ್ಯು ತಾಂಡವಾಡುತ್ತಿದ್ದರೂ ಇದರ ಬಗ್ಗೆ
ಯಾವದೇ ರೀತಿಯ ಔಷಧಿ ಸಿಂಪಡನೆ ಕುರಿತು ಕ್ರಮ ವಹಿಸದ ಪುರಸಭೆ ಅಧಿಕಾರಿಗಳ ವಿರುದ್ದ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.