
ಬೈಲಹೊಂಗಲದಲ್ಲಿ ಕತ್ತೆ ಕಿರುಬ ಪ್ರತ್ಯಕ್ಷ : ಜನರಲ್ಲಿ ಆತಂಕ

ಬೈಲಹೊಂಗಲ: ಪಟ್ಟಣದ ಹೊರ ವಲಯದ ಮೂಳಕೂರ ರಸ್ತೆಯ ಜಮೀನಿನಲ್ಲಿ ಕತ್ತೆಕೀರುಬವೊಂದು ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳೆದ 15 ದಿನಗಳಿಂದ ಕತ್ತೆಕಿರುಬ ಬೆಳಿಗ್ಗೆ ವಾಕಿಂಗ್ ಹೋಗುವವರಿಗೆ, ರೈತರಿಗೆ ಪ್ರತ್ಯಕ್ಷಗೊಂಡು ಭಯಭೀತಿ ಹುಟ್ಟಿಸುತ್ತಿದೆ. ವಾಯು ವಿಹಾರಕ್ಕೆ ಹೋದ ಸ್ಥಳಿಯ ರೊಬ್ಬರು ಜಮೀನಿನಲ್ಲಿ ಕಂಡ ಕತ್ತೆ ಕಿರುಬಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಜಮೀನಿಗೆ ತೆರಳುವ ರೈತರು ಜಾಗೃತೆಯಿಂದರಬೇಕು ಕತ್ತೆ ಕಿರುಬ ಬಂದಿವೆ ಎಂದು ವಿಡಿಯೋ ಹರಿಬಿಟ್ಟದ್ದರಿಂದ ಸುತ್ತಲಿನ ಜನತೆ ಆತಂಕಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗಳು ಕತ್ತೆಕಿರುಬ ಕಾಣಿಸಿಕೊಂಡ ಸ್ಥಳ
ಜಾಗದಲ್ಲಿ ಹುಡುಕಾಟ ನಡೆಸಿದಾಗ ಕತ್ತೆ ಕಿರುಬಿನ ಎರಡು ಮರಿಗಳು ಪತ್ತೆಯಾಗಿವೆ. ಅವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಬೋನಿನಲ್ಲಿ ಇರಿಸಿದ್ದಾರೆ.