ಬೆಳಗಾವಿ : ನದಿ ನೀರಿನಲ್ಲಿ ಕೊಚ್ಚಿಹೋದ ಇಬ್ಬರು ಯುವಕರು
ಚಿಕ್ಕೋಡಿ :ಪಕ್ಕದ ಮಹಾರಾಷ್ಟ್ರದ ಕಾಳಮ್ಮವಾಡಿ ಡ್ಯಾಂನಲ್ಲಿ ನಿಪ್ಪಾಣಿಯ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಸೋಮವಾರ ಮಹಾರಾಷ್ಟ್ರದ ಕೊಲ್ಹಾಪುರ ಕಾಳಮ್ಮವಾಡಿ ಜಲಾಶಯದಲ್ಲಿ ನಡೆದಿದೆ.
ಪ್ರವಾಸಕ್ಕೆಂದು ತೆರಳಿದ್ದ ನಿಪ್ಪಾಣಿ ಮೂಲದ 13 ಯುವಕರ ತಂಡ. ಈ ವೇಳೆ ಕಾಳಮ್ಮವಾಡಿ ಜಲಾಶಯದಲ್ಲಿ ಇಬ್ಬರು ನೀರುಪಾಲಾಗಿರುವವರನ್ನು ನಿಪ್ಪಾಣಿಯ ಗಣೇಶ ಕದಮ್, ಪ್ರತೀಕ್ ಪಾಟೀಲ್ ಎಂದು ಗುರುತಿಸಲಾಗಿದೆ.
ಕಾಳಮ್ಮವಾಡಿ ಜಲಾಶಯ ಪ್ರದೇಶದಲ್ಲಿ ಶವಕ್ಕಾಗಿ ಶೋಧನಾ ಕಾರ್ಯ ಮುಂದುವರೆದಿದೆ.ನಿನ್ನೆಯಷ್ಟೇ ಪುಣೆಯ ಲೋನಾವಳಾ ಬಳಿಯ ಭುಶಿ ಡ್ಯಾಂ ಹಿನ್ನೀರಿನಲ್ಲಿ ನೀರುಪಾಲಾಗಿದ್ದ ಐವರು.
ಲೋನಾವಳಾ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ.ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ಹಾಗೂ ಮಹಾರಾಷ್ಟ್ರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ಮೃತರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.