ಘಟಪ್ರಭಾ ಎಎಸ್ಐ ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜುನ ಚೌಕಾಶಿ ಆಗ್ರಹ
ಘಟಪ್ರಭಾ : ಉಪ್ಪಾರ ಸಮಾಜದ ಹಿರಿಯ ಮುಖಂಡ ನಿಂಗಣ್ಣ ಮಾಳ್ಯಾಗೋಳ್ ಅವರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿರುವ ಘಟಪ್ರಭಾ ಠಾಣೆಯ ಎಎಸ್ಐ ಬಿ ಎಸ್ ಚಿನ್ನಿಕುಪ್ಪಿ ವಿರುದ್ಧ ಕಠಿಣ ಕ್ರಮ ಗೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಚೌಕಾಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಇವರು. ಘಟಪ್ರಭಾ ಠಾಣೆಯ ಎಎಸ್ಐ ಬಿ ಎಸ್ ಚಿನ್ನಿಕುಪ್ಪಿ ಅವರು ಉಪ್ಪಾರ ಸಮುದಾಯದ ಹಿರಿಯ ಮುಖಂಡರ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ. ಜೊತೆಗೆ ಭೋವಿ ಸಮಾಜದ ಯುವಕನನ್ನ ಅನಾವಶ್ಯಕವಾಗಿ ಬಂಧಿಸಿ ಕಿರುಕುಳ ನೀಡುತ್ತಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮಲ್ಲಿಕಾರ್ಜುನ ಚೌಕಾಶಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ವಿಠಲ ಮೇಳವಂಕಿ, ಹಿರಿಯರಾದ ಭೀಮಶಿ ಹಂದಿಗುಂದ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ವಿಲಾಸ ಗಾಡಿವಡ್ಡರ, ಅಶೋಕ ಗಾಡಿವಡ್ಡರ, ಭರಮಣ್ಣ ಗಾಡಿವಡ್ಡರ, ಯುವ ಮುಖಂಡರಾದ ಗುರು ಗಂಗಣ್ಣವರ, ಮಲ್ಲಿಕಾರ್ಜುನ ಅರಭಾವಿ.
ಪಾಂಡು ಭೋಜಿ, ಕಾಶಪ್ಪ ನಿಂಗಣ್ಣವರ, ನಾಗಪ್ಪ ಮಾಳಾಜಗೋಳ, ಎಲ್ ಜಿ ಗಾಡಿವಡ್ಡರ, ಮಹಾಂತೇಶ ಗಾಡಿವಡ್ಡರ, ಆನಂದ ಗಾಡಿವಡ್ಡರ, ವಿವೇಕಾನಂದ ಕತ್ತಿ, ರವಿ ಮಹಾಲಿಂಗಪೂರ, ಮೋಹನ ಗಾಡಿವಡ್ಡರ, ರವಿ ಗಾಡಿವಡ್ಡರ, ವಸಂತ ಗಾಡಿವಡ್ಡರ ಸೇರಿದಂತೆ ಉಪ್ಪಾರ ಹಾಗೂ ವಡ್ಡರ ಸಮಾಜದ ನೂರಾರು ಜನ ಹಾಜರಿದ್ದರು.